ಪೇರಲ ಹಣ್ಣು ಅಥವಾ ಸೀಬೆ ಹಣ್ಣು ತಿನ್ನಲು ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೇ ಆರೋಗ್ಯಕರವೂ ಹೌದು. ಪೇರಲ ಹಣ್ಣುಗಳನ್ನು ತಿನ್ನಲು ಚಳಿಗಾಲ ಅತ್ಯಂತ ಸೂಕ್ತವಾದ ಸಮಯ.
ಇದು ದೇಹದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಕೊಬ್ಬಿನ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ತೂಕ ಹೆಚ್ಚಾಗುವುದು ನಿಶ್ಚಿತ. ನೀವು ತೂಕವನ್ನು ನಿಯಂತ್ರಿಸಲು ಬಯಸಿದರೆ ಸೀಬೆ ಹಣ್ಣನ್ನು ತಿನ್ನಿ.
ಪ್ರತಿದಿನ ಪೇರಲ ಹಣ್ಣು ತಿನ್ನುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಪೇರಲ ಹಣ್ಣಿನಲ್ಲಿ ವಿಟಮಿನ್ ಬಿ 1, ಬಿ 3, ಬಿ 6, ಆರೋಗ್ಯಕರ ಖನಿಜಗಳು, ಫೋಲೇಟ್ ಮತ್ತು ಫೈಬರ್‌ನಂತಹ ಜೀವಸತ್ವಗಳಿವೆ. ಇದರಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಹಾಗಾಗಿ ಪೇರಲವನ್ನು ತಿನ್ನುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ತೂಕ ಕಡಿಮೆಯಾಗಬೇಕೆಂದರೆ ಜೀರ್ಣಕ್ರಿಯೆ ಉತ್ತಮವಾಗಿರಬೇಕು. ಪೇರಲದಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ತೂಕವನ್ನು ನಿಯಂತ್ರಿಸಲು ಪೇರಲ ಹಣ್ಣು ಸಹಾಯ ಮಾಡುತ್ತದೆ.
ಪೇರಲ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಹಾಗಾಗಿ ನಿಮಗೆ ಸಿಹಿ ತಿನ್ನಬೇಕೆಂಬ ಬಯಕೆಯಾದರೆ ಪೇರಲ ಹಣ್ಣನ್ನು ತಿನ್ನಬಹುದು.ಇದರಲ್ಲಿ ಕ್ಯಾಲೋರಿ ಕೂಡ ಕಡಿಮೆ ಇದೆ. ದೇಹಕ್ಕೆ ಸಾಕಷ್ಟು ಶಕ್ತಿಯನ್ನೂ ನೀಡುತ್ತದೆ. ಹಾಗಾಗಿ ಸೀಬೆ ಹಣ್ಣು ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ. ಪೇರಲ ಹಣ್ಣಿನಲ್ಲಿರುವ ಪ್ರೋಟೀನ್ ಗ್ರೆಲಿನ್ ಅನ್ನು ನಿಯಂತ್ರಿಸಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.
ಪೇರಲ ಹಣ್ಣು ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಪೇರಲವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಮಲಬದ್ಧತೆ, ಅಜೀರ್ಣ ಮತ್ತು ಮಲವಿಸರ್ಜನೆಯ ಸಮಸ್ಯೆ ದೂರವಾಗುತ್ತದೆ. ಇದು ಹೊಟ್ಟೆಯನ್ನು ಮೃದುವಾಗಿಸುತ್ತದೆ ಮತ್ತು ಹೊಟ್ಟೆಯಲ್ಲಿನ ಉರಿಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.