ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹವಾಮಾನವು ತಂಪಾಗುತ್ತಿದ್ದಂತೆ ನಮ್ಮ ಚರ್ಮವು ಶುಷ್ಕ ಮತ್ತು ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಚರ್ಮದ ರಕ್ಷಣೆಗಾಗಿ ಹೀಗೆ ಮಾಡಿ.
ಚಳಿಗಾಲದಲ್ಲಿ ಚರ್ಮದ ಸಮಸ್ಯೆ ದೂರ ಮಾಡಿ ಚರ್ಮದ ತೇವಾಂಶ ಕಾಪಾಡಲು ಹೈಡ್ರೇಟಿಂಗ್ ಫೇಸ್ ಸೀರಮ್ ಬಳಸಿ.
ಇದನ್ನು ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಅಲೋವೆರಾ ಜೆಲ್ ಮತ್ತು ರೋಸ್ ವಾಟರ್ ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ವಿಟಮಿನ್ ಇಯ 2 ಕ್ಯಾಪ್ಸುಲ್ ಹಾಕಿ ಮಿಕ್ಸ್ ಮಾಡಿ ಮುಖವನ್ನು ಚೆನ್ನಾಗಿ ವಾಶ್ ಮಾಡಿ ಈ ಸಿರಮ್ ನ್ನು ಬಳಸಿ. ಇದರಿಂದ ಚಳಿಗಾಲದ ಚರ್ಮದ ಸಮಸ್ಯೆ ದೂರವಾಗುತ್ತದೆ.