ಕೆಲವರ ಕೈ ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಕೂಡ ಶುಷ್ಕವಾಗಿರುತ್ತದೆ. ಮುಟ್ಟಿದ್ರೆ ಒರಟು ಅನುಭವವಾಗುತ್ತದೆ. ಗಾಳಿ, ಸೂರ್ಯನ ಕಿರಣ ಹಾಗೂ ರಾಸಾಯನಿಕ ವಸ್ತುಗಳನ್ನು ಮುಟ್ಟುವುದು ಹಾಗೂ ದೈಹಿಕ ಪರಿಶ್ರಮ ಎಲ್ಲವೂ ಇದಕ್ಕೆ ಕಾರಣವಾಗುತ್ತದೆ.
ಒಣಗಿರುವ, ಸೌಂದರ್ಯ ಕಳೆದುಕೊಂಡಿರುವ ನಿಮ್ಮ ಕೈಗಳನ್ನು ಕೋಮಲಗೊಳಿಸಲು ಈ ಕೆಳಗಿನ ಉಪಾಯಗಳನ್ನು ಅನುಸರಿಸಿ.
ಒಣ ಕೈ ಸಮಸ್ಯೆಗೆ ಕ್ಯಾಸ್ಟರ್ ಆಯಿಲ್ ಒಳ್ಳೆಯ ಮದ್ದು. ಕ್ಯಾಸ್ಟರ್ ಆಯಿಲ್ ಗೆ ನಿಂಬೆ ರಸ ಹಾಗೂ ಆಲಿವ್ ಆಯಿಲ್ ಹಾಕಿ ಈ ಮಿಶ್ರಣವನ್ನು ಅಂಗೈಗೆ ಹಚ್ಚಿ ಉಜ್ಜಿಕೊಳ್ಳಿ. ಇದು ಕೈಗಳನ್ನು ಮೃದುಗೊಳಿಸುತ್ತದೆ.
ಟೋಮೋಟೋ ಕೂಡ ನಿಮ್ಮ ಕೈಗಳನ್ನು ಕೋಮಲಗೊಳಿಸುತ್ತದೆ. ಟೊಮೊಟೊ ರಸಕ್ಕೆ ಸಮ ಪ್ರಮಾಣದಲ್ಲಿ ನಿಂಬೆ ರಸ ಹಾಗೂ ಗ್ಲಿಸರಿನ್ ಹಾಕಿ ಅಂಗೈ ಉಜ್ಜಿಕೊಳ್ಳಿ. ಎರಡು ನಿಮಿಷದ ನಂತ್ರ ಕೈ ತೊಳೆದುಕೊಳ್ಳಿ.
ಸಮ ಪ್ರಮಾಣದಲ್ಲಿ ಆಲಿವ್ ಆಯಿಲ್ ಹಾಗೂ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ, ಕೈಗೆ ಹಚ್ಚಿ ಉಜ್ಜಿಕೊಳ್ಳಿ. ಇದು ಕೈಗಳನ್ನು ಮೃದುಗೊಳಿಸಿ, ಶುಷ್ಕವನ್ನು ಹೋಗಲಾಡಿಸುತ್ತದೆ.