ಚಳಿಗಾಲದಲ್ಲಿ ಕೂದಲನ್ನು ಹೊಳಪಾಗಿಡಲು ಮಾಡಬೇಕಾದ್ದೇನು…..? 04-11-2022 5:30AM IST / No Comments / Posted In: Beauty, Latest News, Live News, Life Style ಚಳಿ ಮತ್ತು ಗಾಳಿಯ ತೀವ್ರತೆಯಿಂದಾಗಿ ನಿಮ್ಮ ಕೂದಲಿನಲ್ಲಿರುವ ನೈಸರ್ಗಿಕವಾದ ಎಣ್ಣೆಯ ಅಂಶ ಕಡಿಮೆಯಾಗಿ ಬಿಡುತ್ತದೆ. ಇದರಿಂದ ಕೂದಲು ಒಣಗಿದಂತಾಗಿ, ಒರಟಾಗುತ್ತದೆ. ಹೊಳಪನ್ನು ಕಳೆದುಕೊಳ್ಳುತ್ತದೆ. ಅದನ್ನು ತಡೆಯಲು ನಿಯಮಿತವಾಗಿ ಹೇರ್ ಟ್ರಿಮ್ಮಿಂಗ್ ಮಾಡಿಸಿಕೊಳ್ಳಿ. ಇದರಿಂದ ಚಳಿಗಾಲದಲ್ಲಿ ಹೇರ್ ಸ್ಪ್ಲಿಟ್ ಆಗದಂತೆ ತಡೆಯಬಹುದು. ಚಳಿಗಾಲದಲ್ಲಿ ಡ್ರೈ ಶಾಂಪೂವನ್ನು ಬಳಸಿ. ಇದರಿಂದ ನಿಮ್ಮ ಕೂದಲಿನಲ್ಲಿ ನೈಸರ್ಗಿಕವಾದ ಎಣ್ಣೆಯ ಅಂಶ ಹಾಗೇ ಇರುತ್ತದೆ. ಚಳಿಗಾಲದಲ್ಲಿ ತಲೆ ಹೊಟ್ಟು ಆಗದಂತೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹಾಗಾಗಿ ಪದೇ ಪದೇ ಶಾಂಪೂ ಹಾಕಿ ತಲೆ ಸ್ನಾನ ಮಾಡಬೇಡಿ. ಸ್ನಾನವಾದ ತಕ್ಷಣ ಒದ್ದೆ ಕೂದಲನ್ನು ಬಾಚಿಕೊಳ್ಳಬೇಡಿ. ಹೇರ್ ಸ್ಕ್ರಬ್ ಗಳನ್ನು ಬಳಸಿ. ಇದರಿಂದ ಡೆಡ್ ಸ್ಕಿನ್ ಲೇಯರ್ ಹೋಗಿ, ಕೂದಲು ಮೃದುವಾಗುತ್ತದೆ. ಚಳಿಗಾಲದಲ್ಲಿ ಹೇರ್ ಕಂಡಿಷನಿಂಗ್ ಅತ್ಯಂತ ಅವಶ್ಯಕ. ಸಿಲ್ಕಿ ಮತ್ತು ಸ್ಮೂತ್ ಹೇರ್ ಗಾಗಿ ಹೇರ್ ಮಾಸ್ಕ್ ಗಳನ್ನು ಕೂಡ ಬಳಸಬಹುದು. ಅಗಲವಾದ ಹಣಿಗೆಗಳಿಂದ ಕೂದಲನ್ನು ಬಾಚಿಕೊಳ್ಳಿ. ಸಿಕ್ಕಾಗದಂತೆ ನಾಜೂಕಾಗಿ -ಇಟ್ಟುಕೊಳ್ಳಿ. ಹೊಟ್ಟು ನಿವಾರಣೆ ಮಾಡುವ ಲೋಶನ್ ಹಚ್ಚಿ 7-10 ನಿಮಿಷ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. 2 ನಿಮಿಷ ಬಿಟ್ಟು ಶಾಂಪೂ ಹಾಕಿ ತಲೆ ಸ್ನಾನ ಮಾಡಿ. ನಂತರ ಟವೆಲ್ ಸುತ್ತಿಕೊಂಡು ಚೆನ್ನಾಗಿ ಕೂದಲನ್ನು ಒಣಗಿಸಿ. ಡ್ಯಾಂಡ್ರಫ್ ಕಂಟ್ರೋಲ್ ಕಂಡಿಷನರ್ ಗಳನ್ನೇ ಬಳಸುವುದು ಉತ್ತಮ. ಹೀಗೆ ಮಾಡಿದಲ್ಲಿ ಚಳಿಗಾಲದಲ್ಲೂ ನಿಮ್ಮ ಕೂದಲು ಹೊಳಪಾಗಿರುತ್ತದೆ.