ಯಾವುದೇ ವಾಹನವಿರಲಿ ಅದರ ನಿರ್ವಹಣೆಯನ್ನು ಮಾಡುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ. ಈಗ ಟಾಟಾ ಕಂಪನಿ ಚಳಿಗಾಲದಲ್ಲಿ ಕಾರಿನ ಆರೈಕೆ ಕುರಿತಂತೆ ಕೆಲವೊಂದು ಟಿಪ್ಸ್ ನೀಡಿದ್ದು, ಅದರ ವಿವರ ಇಲ್ಲಿದೆ.
ಟೈಯರ್ ಟ್ರೇಡಿಂಗ್ ಮತ್ತು ಗಾಳಿಯ ಒತ್ತಡ: ಟೈರುಗಳು ಯಾವುದೇ ವಾಹನದ ಅತಿ ಪ್ರಮುಖ ಸಾಧನ. ಅವುಗಳ ಮೇಲೆ ಸದಾ ಒಂದು ಕಣ್ಣಿಡಬೇಕಾದ್ದು ಅನಿವಾರ್ಯ. ಟೈರುಗಳ ನಿಯಮಿತ ನಿರ್ವಹಣೆ ಅಗತ್ಯವಿರುತ್ತದೆ. ಅವುಗಳ ಟ್ರೆಡಿಂಗ್ ಹಾಳಾಗಿದ್ದರೆ ಬದಲಿಸಬೇಕಾಗುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಟೈರ್ ನಲ್ಲಿ ಗಾಳಿಯ ಒತ್ತಡವನ್ನು ಆಗಾಗ ಪರಿಶೀಲಿಸಿ ಅವು ಅಗತ್ಯ ಪ್ರಮಾಣದಲ್ಲಿ ಗಾಳಿಯಿಂದ ತುಂಬಿರುವುದನ್ನು ಖಾತರಿ ಮಾಡಿಕೊಳ್ಳಿ.
ಚಾಲೂ ಮಾಡಿದ ಕೂಡಲೇ ಚಲಿಸಬೇಡಿ: ಶೀತಗಾಲದಲ್ಲಿ ಕಾರಿನ ಆರೈಕೆಯ ಸರಳ ವಿಧಾನಗಳಲ್ಲಿ ಒಂದು ಅದರ ಇಂಜಿನ್ ಸಂಪೂರ್ಣ ತಣ್ಣಗಾಗದಂತೆ ತಡೆಯುವುದಾಗಿದೆ. ಎಂಜಿನ್ ಬೆಚ್ಚಗಿದ್ದರೆ ಕೀಲೆಣ್ಣೆಯು ಎಂಜಿನ್ ನ ಎಲ್ಲ ಭಾಗಗಳಲ್ಲಿ ಪಸರಿಸಲು ಅನುಕೂಲವಾಗುತ್ತದೆ. ದಿನದಲ್ಲಿ ಮೊದಲ ಬಾರಿ ಕಾರು ಚಾಲು ಮಾಡಿದಾಗ ಕೂಡಲೇ ಗೇರ್ ಹಾಕಿ ಹೊರಡುವ ಬದಲು ಕೆಲ ಕ್ಷಣಗಳ ಕಾಲ ಎಂಜಿನ್ ಅನ್ನು ಹಾಗೆಯೇ ಬಿಡಿ. ಹೀಗೆ ಮಾಡುವುದರಿಂದ ಎಂಜಿನ್ ಬೆಚ್ಚಗಾಗುತ್ತಲ್ಲದೆ ಅದರ ಕಾರ್ಯಕ್ಷಮತೆಯು ಹೆಚ್ಚುತ್ತದೆ. ಅಲ್ಲದೆ, ಇಂಜಿನ್ ಸವೆತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಎಂಜಿನ್ ಅನ್ನು ತಂಪಾಗಿರಿಸಿ: ಶೀತ ಗಾಳಿಯ ಸಂದರ್ಭಗಳಲ್ಲಿ ಇಂಜಿನ್ ಅನ್ನು ಸಾಧ್ಯವಾದಷ್ಟು ತಂಪಾಗಿ ಇರಿಸುವುದನ್ನು ರೂಢಿಸಿಕೊಳ್ಳಿ. ಅದು ಚಳಿಗಾಲದಲ್ಲಿ ನಿಮ್ಮ ಎಂಜಿನ್ ಸ್ತಬ್ಧವಾಗುವುದನ್ನು ತಡೆಯುತ್ತದೆ. ಮೇಲಾಗಿ ಇದು ನಿಮ್ಮ ಎಂಜಿನ್ ಅನ್ನು ಅಗತ್ಯಕ್ಕಿಂತ ಹೆಚ್ಚು ಬಿಸಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ.
ಅಗತ್ಯ ವಸ್ತುಗಳ ಕಿಟ್: ಚಳಿಗಾಲದಲ್ಲಿ ನಿಮ್ಮ ಕಾರ್ ನಲ್ಲಿ ಅಗತ್ಯ ವಸ್ತುಗಳ ಕಿಟ್ ಅನ್ನು ಸದಾ ತೆಗೆದುಕೊಂಡು ಹೋಗಿ. ಈ ಉಪಕರಣಗಳು ಚಳಿಗಾಲದ ವೇಳೆ ಸಾಕಷ್ಟು ಉಪಯೋಗಕ್ಕೆ ಬರುತ್ತದೆ. ಕಿಟ್ ನಲ್ಲಿ ಫ್ಲಾಶ್ ಲೈಟ್, ಪ್ರಥಮ ಚಿಕಿತ್ಸಾ ಬ್ಯಾಗು, ಜಂಪರ್ ಕೇಬಲ್ ಗಳು, ಪ್ರತಿಫಲದ ತ್ರಿಕೋನಗಳು ಬದಲಿ ಬ್ಯಾಟರಿ ಮತ್ತು ಚಾರ್ಜರ್ ಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.