ಚಳಿಗಾಲದಲ್ಲಿ ಚರ್ಮ ಒಣಗುವ ಕಾರಣ ಚರ್ಮದ ಕಿರಿಕಿರಿ, ತುರಿಕೆಗಳು ಉಂಟಾಗುತ್ತದೆ. ಇದನ್ನು ತುರಿಸಿಕೊಳ್ಳುವುದರಿಂದ ಚರ್ಮ ಕೆಂಪಾಗಿ ಅಲರ್ಜಿಯಾಗುತ್ತದೆ. ಹಾಗಾಗಿ ಈ ಚರ್ಮದ ಅಲರ್ಜಿಗಳನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ಹಚ್ಚಿ.
ವೀಳ್ಯದೆಲೆ ಉರಿಯೂತ ನಿವಾರಿಸುವ ಗುಣಗಳನ್ನು ಹೊಂದಿದೆ. ಇದು ಚರ್ಮದ ಅಲರ್ಜಿಯಿಂದ ಉಂಟಾಗುವ ನೋವನ್ನು ನಿವಾರಿಸುತ್ತದೆ. ಹಾಗಾಗಿ ವೀಳ್ಯದೆಲೆ ತೆಗೆದುಕೊಂಡು ರುಬ್ಬಿ ಪೇಸ್ಟ್ ತಯಾರಿಸಿ ಚರ್ಮಕ್ಕೆ ಹಚ್ಚಿಕೊಳ್ಳಿ, ಇಲ್ಲವಾದರೆ ಬೇವಿನ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ.
ಅಪ್ಪು ಕನಸಿನ ಟೈಟಲ್ ಟೀಸರ್ ಬಿಡುಗಡೆಯ ದಿನಾಂಕ ಪ್ರಕಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್
ಅಲೋವೆರಾ ಚರ್ಮವನ್ನು ಮೃದುಗೊಳಿಸುತ್ತದೆ. ಪುದೀನಾ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಹಾಗಾಗಿ ಅಲೋವೆರಾ ಜೆಲ್ ಗೆ ಪುದೀನಾ ರಸ ಮಿಕ್ಸ್ ಮಾಡಿ ಚರ್ಮಕ್ಕೆ ಹಚ್ಚಿ.
ನಿಂಬೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಹಾಗಾಗಿ ನಿಂಬೆ ರಸವನ್ನು ಸೇವಿಸುವುದರಿಂದ ಕೂಡ ಚರ್ಮದ ಅಲರ್ಜಿ ಸಮಸ್ಯೆ ಉಂಟಾಗುವುದಿಲ್ಲ.