ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ದುರ್ಬಲವಾಗಿರುತ್ತದೆ. ಶೀತಲ ಗಾಳಿಯಿಂದ ನಿಮಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ನಿಮಗೆ ಈ ಸಮಸ್ಯೆ ಕಾಡಬಾರದಂತಿದ್ದರೆ ಶ್ವಾಸಕೋಶವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ಈ ನಿಯಮ ಪಾಲಿಸಿ.
ಧೂಮಪಾನ ಮಾಡುವುದರಿಂದ ಉಸಿರಾಟದ ಸಮಸ್ಯೆ ಮತ್ತು ಶ್ವಾಸಕೋಶದ ಸಮಸ್ಯೆ ಕಾಡುತ್ತದೆ. ಆದಕಾರಣ ಧೂಮಪಾನವನ್ನು ತ್ಯಜಿಸಬೇಕು.
ಪಕ್ಕೆಲುಬು ಹಿಗ್ಗಿಸುವಂತಹ ಉಸಿರಾಟಕ್ಕೆ ಸಂಬಂಧಪಟ್ಟ ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಶ್ವಾಸಕೋಶ ಶುದ್ಧವಾಗಿ ಸದೃಢವಾಗಿರುತ್ತದೆ.
ಪ್ರತಿದಿನ ಸ್ಟೀಮ್ ತೆಗೆದುಕೊಳ್ಳಿ. ಇದು ಶ್ವಾಸಕೋಶದಲ್ಲಿರುವ ಉಸಿರಾಟಕ್ಕೆ ಅಡ್ಡಿಪಡಿಸುವ ಲೋಳೆ ಅಂಶವನ್ನು ನಿವಾರಿಸುತ್ತದೆ.
ಪ್ರತಿದಿನ ಶುಂಠಿಯನ್ನು ಸೇವಿಸಿ. ಇದು ಶೀತ, ಉಸಿರಾಟದ ಸಮಸ್ಯೆಗೆ ಮುಕ್ತಿ ನೀಡುತ್ತದೆ, ಮತ್ತು ಶ್ವಾಸಕೋಶವನ್ನು ಆರೋಗ್ಯಕರವಾಗಿರಿಸುತ್ತದೆ.
ಪ್ರತಿದಿನ ಬೆಳಿಗ್ಗೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಇದು ಗಂಟಲಿನಲ್ಲಿರುವ ಬ್ಯಾಕ್ಟಿರಿಯಾಗಳನ್ನು ತೊಲಗಿಸಿ ಉಸಿರಾಡಲು ಸಹಾಯ ಮಾಡುತ್ತದೆ.