ಚಳಿಗಾಲದಲ್ಲಿ ಎದುರಾಗುವ ದೊಡ್ಡ ಸಮಸ್ಯೆಯೆಂದರೆ ತ್ವಚೆ ಒಣಗುವುದು. ಒಂದು ಬಾರಿ ಚರ್ಮ ಒಣಗಿದರೆ ತುರಿಕೆ ಆರಂಭವಾಗುತ್ತದೆ. ತುರಿಕೆ ತಡೆಯಲಾಗದೆ ಕೆರೆದರೆ ರಕ್ತ ಬಂದು ಹುಣ್ಣು ಉಂಟಾಗುತ್ತದೆ.
ಇದರೊಳಗೆ ಬ್ಯಾಕ್ಟೀರಿಯಾ ಸೇರಿ ಇನ್ನಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಆದ್ದರಿಂದ ಮೊದಲೇ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಂಡರೆ ಈ ಸಮಸ್ಯೆ ಬರದು.
* ಪ್ರತಿದಿನ ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆಯಂತಹ ತೈಲಗಳನ್ನು ಲೇಪಿಸಿಕೊಳ್ಳುವುದು ಒಳಿತು. ಸ್ನಾನ ಮಾಡಿದೊಡನೆ ದೇಹವನ್ನು ಪೂರ್ತಿ ಒರೆಸುವುದಕ್ಕಿಂತ ಮೊದಲೇ ಅವುಗಳನ್ನು ಹಚ್ಚಿದರೆ ಚರ್ಮ ಮೃದುವಾಗುತ್ತದೆ.
* ಚಳಿಗಾಲದಲ್ಲಿ ಅಧಿಕ ಸಮಯದಲ್ಲಿ ಸ್ನಾನ ಮಾಡದೆ ನಾಲ್ಕು ಐದು ನಿಮಿಷ ಮೀರದಂತೆ ಮಿಂದರೆ ಒಳಿತು. ಬಿಸಿ ನೀರಿಗಿಂತ ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸುವುದು ಉತ್ತಮ. ನೀರಿಗೆ ಸ್ವಲ್ಪ ಆಲಿವ್ ಎಣ್ಣೆ ಮಿಶ್ರ ಮಾಡುವುದು ಒಳ್ಳೆಯದು.
* ಸಾಬೂನಿನ ಬಳಕೆಗಿಂತ ಕಡಲೆಹಿಟ್ಟು ಉತ್ತಮ ಆಯ್ಕೆ. ಯಾಕೆಂದರೆ ಕೆಲ ಸೋಪ್ ಗಳು ಚರ್ಮವನ್ನು ಒಡೆಯುವಂತೆ ಮಾಡುತ್ತದೆ.
* ಬಟ್ಟೆ, ಪಾತ್ರೆ ಇತ್ಯಾದಿ ತೊಳೆದ ನಂತರ ಕೈಗಳಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡರೆ ಚರ್ಮ ಒಡೆಯದೆ ಮೃದುವಾಗಿರುತ್ತದೆ.
* ತುಟಿಗಳು ಆಗಾಗ ಒಡೆಯುವುದರಿಂದ ಬಾದಾಮಿ ಎಣ್ಣೆ, ಹಾಲಿನ ಕೆನೆ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳುವುದು ಒಳಿತು.