ಚಳಿಗಾಲದಲ್ಲಿ ತಂಪಾದ ಗಾಳಿ ಹೆಚ್ಚಾಗಿರುವುದರಿಂದ ಇದು ಚರ್ಮದ ತೇವಾಂಶವನ್ನು ಹೀರಿಕೊಂಡು ನಿಮ್ಮ ಸ್ಕೀನ್ ನ್ನು ಬೇಗ ಡ್ರೈ ಮಾಡುತ್ತದೆ. ಈ ಸಮಸ್ಯೆಯಿಂದ ಚರ್ಮವನ್ನು ರಕ್ಷಿಸಲು ಕೆಲವರು ಚರ್ಮದ ರಕ್ಷಣೆಯ ಉತ್ಪನ್ನಗಳನ್ನು ಬಲಸುತ್ತಾರೆ. ಆದರೆ ಚಳಿಗಾಲದಲ್ಲಿ ಈ ಸೌಂದರ್ಯ ವರ್ಧಕಗಳನ್ನು ಮಾತ್ರ ಬಳಸಬೇಡಿ.
*ಆಲ್ಕೋಹಾಲ್ ಆಧಾರಿತ ಟೋನರ್ ಗಳು ಬಳಸುವುದನ್ನು ತಪ್ಪಿಸಿ. ಯಾಕೆಂದರೆ ಇದು ನಿಮ್ಮ ಚರ್ಮದ ನೈಸರ್ಗಿಕ ತಡೆಗೋಡೆಯನ್ನು ದುರ್ಬಲಗೊಳಿಸುತ್ತದೆ.
*ಮುಲ್ತಾನಿ ಮಿಟ್ಟಿಯಂತಹ ಮಣ್ಣಿನಿಂದ ತಯಾರಿಸುವ ಫೇಸ್ ಪ್ಯಾಕ್ ಗಳನ್ನು ಬಳಸಬೇಡಿ. ಇದರಿಂದ ಚರ್ಮ ಮತ್ತಷ್ಟು ಒಣಗಿಸುತ್ತದೆ.
* ಮುಖಕ್ಕೆ ಸೋಪ್ ಬಳಸುತ್ತಿರುವವರು ಚಳಿಗಾಲದಲ್ಲಿ ಮಾತ್ರ ಅದನ್ನು ಬಳಸಬೇಡಿ. ಇದರಿಂದ ಕೂಡ ಚರ್ಮ ಡ್ರೈ ಆಗುತ್ತದೆ.