ಸಪೋಟಾ ಮಕ್ಕಳಿಗೆ ಅತ್ಯಂತ ಇಷ್ಟವಾದ ಹಣ್ಣುಗಳಲ್ಲೊಂದು. ರುಚಿಯ ಜೊತೆಗೆ ಆರೋಗ್ಯಕ್ಕೂ ಹೇಳಿ ಮಾಡಿಸಿದಂತಿದೆ. ಸಪೋಟ ಹಣ್ಣಿನಲ್ಲಿ ಎಂಟಿಒಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಅನೇಕ ಪೋಷಕಾಂಶಗಳಿವೆ. ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳೂ ಸಮೃದ್ಧವಾಗಿವೆ.
ಸಪೋಟ ಅತ್ಯಂತ ಆರೋಗ್ಯಕರ ಹಣ್ಣು ಎನಿಸಿಕೊಂಡಿದ್ದರೂ ತೀರಾ ದುಬಾರಿಯಲ್ಲ, ಇದರ ಬೆಲೆ ಕೂಡ ಕಡಿಮೆ. ಚಳಿಗಾಲದಲ್ಲಿ ಸಪೋಟ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ದೇಹದ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ವಿಟಮಿನ್ ಸಿ ಮತ್ತು ಎಂಟಿಒಕ್ಸಿಡೆಂಟ್‌ಗಳಿರುವುದರಿಂದ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಸಪೋಟ ಸೇವನೆಯಿಂದ ಶೀತ ಮತ್ತು ಜ್ವರವನ್ನು ದೂರವಿಡಬಹುದು. ಮೂಳೆಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಪರಸ್ ನಂತಹ ಖನಿಜಗಳಿವೆ. ಮೂಳೆ ಮತ್ತು ಸ್ನಾಯುಗಳಲ್ಲಿ ನೋವಿದ್ದರೆ ಸಪೋಟ ಹಣ್ಣನ್ನು ತಿನ್ನಬೇಕು. ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಸಪೋಟ ಹಣ್ಣಿನಲ್ಲಿವೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಈ ಹಣ್ಣನ್ನು ನೀರಿನಲ್ಲಿ ಕುದಿಸಿಕೊಂಡು ಕುಡಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಬಿಪಿ ಸಮಸ್ಯೆ ಇರುವವರು ಕೂಡ ಸಪೋಟ ತಿನ್ನಬಹುದು.
ಸಪೋಟ ಹಣ್ಣಿನಲ್ಲಿರುವ ಪೋಷಕಾಂಶಗಳು ತೂಕವನ್ನು ಕಡಿಮೆ ಮಾಡುತ್ತವೆ. ಇದು ಫೈಬರ್ನಲ್ಲಿ ಸಮೃದ್ಧವಾಗಿದೆ. ಹಾಗಾಗಿ ನಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಹಸಿವು ಕೂಡ ನಿಯಂತ್ರಣದಲ್ಲಿರುತ್ತದೆ.ಸಪೋಟ ಹಣ್ಣಿನಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಸಿ ಇರುವುದರಿಂದ ಇದು ಚರ್ಮಕ್ಕೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಒಳಗಿನಿಂದ ಚರ್ಮವನ್ನು ಪೋಷಿಸುತ್ತದೆ. ಚರ್ಮದ ಶುಷ್ಕತೆಯನ್ನು ಹೋಗಲಾಡಿಸುತ್ತದೆ.