ನೆಲ್ಲಿಕಾಯಿ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ನೆಲ್ಲಿಕಾಯಿಯನ್ನು ಬೇರೆ ಬೇರೆ ರೀತಿಯಲ್ಲಿ ಸೇವಿಸಲಾಗುತ್ತದೆ. ಅದ್ರ ಉಪ್ಪಿನಕಾಯಿ ಎಲ್ಲರಿಗೂ ಇಷ್ಟವಾಗುತ್ತದೆ. ನೆಲ್ಲಿಕಾಯಿ ಜ್ಯೂಸ್ ಕೂಡ ಆರೋಗ್ಯಕ್ಕೆ ಒಳ್ಳೆಯದು. ಹುಳಿ ಜ್ಯೂಸ್ ಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಪ್ರತಿದಿನ ಕುಡಿದ್ರೆ ಸಾಕಷ್ಟು ಲಾಭವಿದೆ.
ಪ್ರತಿ ದಿನ ಜ್ಯೂಸ್ ಮಾಡಲು ಕಷ್ಟ ಎನ್ನುವವರು ಒಂದೇ ಬಾರಿ ಜ್ಯೂಸ್ ತಯಾರಿಸಿ ಅದನ್ನು ಫ್ರಿಜ್ ನಲ್ಲಿಟ್ಟು ಒಂದು ತಿಂಗಳವರೆಗೆ ಸೇವಿಸುತ್ತ ಬರಬಹುದು. ಈ ಜ್ಯೂಸ್ ತಯಾರಿಸುವುದು ಬಹಳ ಸುಲಭ. ನೆಲ್ಲಿಕಾಯಿಯನ್ನು ಸ್ವಚ್ಛವಾಗಿ ತೊಳೆದು ಅದನ್ನು ಕತ್ತರಿಸಿ. ಮಧ್ಯದ ಬೀಜವನ್ನು ಹೊರಗೆ ತೆಗೆದು ಉಳಿದ ಭಾಗವನ್ನು ಜ್ಯೂಸರ್ ಗೆ ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ನೀವು ಗಾಳಿಯಾಡದ ಗಾಜಿನ ಪಾತ್ರೆಯಲ್ಲಿ ಹಾಕಿ, ಫ್ರೀಜರ್ ನಲ್ಲಿಟ್ಟು ಒಂದು ತಿಂಗಳು ಬಳಸಬಹುದು.
ಪ್ರತಿ ದಿನ ಫ್ರೆಶ್ ಜ್ಯೂಸ್ ಸೇವನೆ ಮಾಡ್ತೇವೆ ಎನ್ನುವವರು ಎರಡು ನೆಲ್ಲಿಕಾಯಿಗೆ ಸ್ವಲ್ಪ ನೀರು ಹಾಕಿ ಮಿಕ್ಸಿ ಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಕುಡಿಯಬೇಕು. ಇದು ಕೂದಲು, ಕಣ್ಣಿನ ಆರೋಗ್ಯ ಹಾಗೂ ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು.