alex Certify ಚಳಿಗಾಲದಲ್ಲಿ ಆರೋಗ್ಯಕ್ಕೆ ಉಪಯುಕ್ತ ಈ ʼಪರೋಟಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಆರೋಗ್ಯಕ್ಕೆ ಉಪಯುಕ್ತ ಈ ʼಪರೋಟಾʼ

ಚಳಿಗಾಲದಲ್ಲಿ ಬಿಸಿ ಬಿಸಿ ತಿಂಡಿ ತಿನ್ನುವ ಮಜವೇ ಬೇರೆ. ಈ ಕಾಲದಲ್ಲಿ ಬೆಳೆಯುವಂತಹ ಬಹಳಷ್ಟು ತರಕಾರಿಗಳಿಂದ ಪರೋಟಾ ಮಾಡಬಹುದು. ಚಟ್ನಿ, ಬೆಣ್ಣೆ ಇದ್ದರಂತೂ ಅದ್ರ ರುಚಿ ದುಪ್ಪಟ್ಟಾಗುತ್ತೆ. ಜೊತೆಗೆ ಈ ಪರೋಟಾಗಳಿಂದ ಅನೇಕ ಪ್ರಯೋಜನಗಳಿವೆ.

ಚಳಿಗಾಲದಲ್ಲಿ ಮೂಲಂಗಿ ಪರೋಟಾ ತಿಂದು ನೋಡಿ. ಮೂಲಂಗಿ ತಿನ್ನುವುದರಿಂದ ಶೀತ ಕಡಿಮೆಯಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಜಾಸ್ತಿ ಇರುವುದರಿಂದ ಚರ್ಮ ಕಾಂತಿಯುತವಾಗಿರಲು ಸಹಕಾರಿ. ಕಾಮಾಲೆ ರೋಗಕ್ಕೂ ಮೂಲಂಗಿ ಬಹಳ ಒಳ್ಳೆಯದು.

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ರಿಯಾಕ್ಟ್ ಮಾಡಲ್ಲ; ಬಿಟ್ ಕಾಯಿನ್ ನಲ್ಲಿ ಕಾಂಗ್ರೆಸ್ ನಾಯಕರ ಹೆಸರಿದೆ ಅದರ ಬಗ್ಗೆ ಉತ್ತರಿಸಲಿ ಎಂದ ಸಿಎಂ

ಅವರೆಕಾಳು ಪರೋಟಾ ಚಳಿಗಾಲದಲ್ಲಿ ಆರೋಗ್ಯಕರ. ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣವಿರುತ್ತದೆ. ಇದು ಸುಕ್ಕುಗಳು ಬರುವುದನ್ನು ನಿಯಂತ್ರಿಸುತ್ತದೆ. ಕ್ಯಾನ್ಸರ್ ರೋಗಕ್ಕೂ ಒಳ್ಳೆಯದು. ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಚಳಿಗಾಲದಲ್ಲಿ ಎಲೆಕೋಸಿನ ಪರೋಟಾ ತಿನ್ನಲೇಬೇಕು. ಎಲೆಕೋಸಿನಲ್ಲಿ ಅನೇಕ ಪ್ರಯೋಜನಗಳಿವೆ. ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಇದು ಒಳ್ಳೆಯದು. ಇದರಲ್ಲಿ ವಿಟಮಿನ್ ಬಿ ಇರುವುದರಿಂದ ಮೆದುಳಿನ ಉತ್ತಮ ಬೆಳವಣಿಗೆಗೆ ಸಹಕಾರಿ. ಹಾಗೇ ವಯಸ್ಸು ಹೆಚ್ಚಾದಂತೆ ದುರ್ಬಲವಾಗುವ ನೆನಪಿನ ಶಕ್ತಿಯನ್ನು ಇದು ಬಲಪಡಿಸುತ್ತದೆ.

ಚಳಿಗಾಲದಲ್ಲಿ ಪಾಲಕ್ ಸೊಪ್ಪು ಮಾರುಕಟ್ಟೆಯಲ್ಲಿ ಸಾಕಷ್ಟು ಸಿಗುತ್ತದೆ. ಇದರ ಪರೋಟಾ ಸೇವನೆಯಿಂದ ಅನೇಕ ಪ್ರಯೋಜನಗಳಿವೆ. ದೃಷ್ಟಿ ಸುಧಾರಿಸುವುದಲ್ಲದೆ, ಮೈಗ್ರೇನ್, ಅಸ್ತಮಾವನ್ನು ದೂರ ಇಡುತ್ತದೆ.

‘ಲವ್ ನ್ವಾಂಟಿಟಿ’ಗೆ ಸೊಂಟ ಬಳುಕಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು

ಕೆಲವರು ಪಪ್ಪಾಯಿ ಪರೋಟಾವನ್ನು ಮಾಡ್ತಾರೆ. ಇದು ರುಚಿಕರವಾಗಿರುವುದಲ್ಲದೆ ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್ ಎ ಅಂಶ ಇದರಲ್ಲಿರುತ್ತದೆ. ಹಾಗೇ ಚರ್ಮದಲ್ಲಿ ಹೊಸ ಜೀವಕೋಶಗಳ ಸೃಷ್ಟಿ ಹಾಗೂ ಚರ್ಮದಲ್ಲಿ ತೇವಾಂಶ ಹಿಡಿದಿಡುವ ಕೆಲಸವನ್ನು ಪಪ್ಪಾಯ ಮಾಡುತ್ತದೆ.

ಪನ್ನೀರ್ ಪರೋಟಾ ಕೇವಲ ಚಳಿಗಾಲಕ್ಕೊಂದೇ ಅಲ್ಲ ಎಲ್ಲ ಕಾಲದಲ್ಲೂ ಇದನ್ನು ಮಾಡಲಾಗುತ್ತೆ. ಪನ್ನೀರ್ ಮೂಳೆ ಹಾಗೂ ಹಲ್ಲುಗಳನ್ನು ಬಲಗೊಳಿಸುತ್ತದೆ. ಬೆನ್ನು, ಕೀಲು ನೋವಿಗೆ ಇದು ಒಳ್ಳೆಯದು. ಪನ್ನೀರಿನಲ್ಲಿ ಪೋಷಕಾಂಶವಿರುತ್ತದೆ. ಹಾಗೇ ಅದು ತೂಕ ಕಡಿಮೆ ಮಾಡಲು ಸಹಕಾರಿ.

ಚಳಿಗಾಲದಲ್ಲಿ ಈ ಎಲ್ಲ ಪರೋಟಾ ಸೇವನೆ ಒಳ್ಳೆಯದು. ಆದ್ರೆ ಒಂದೇ ಸಮಯದಲ್ಲಿ ಜಾಸ್ತಿ ಪರೋಟಾ ಸೇವಿಸಬಾರದು. ಅದರಲ್ಲಿ ಎಣ್ಣೆ ಅಂಶ ಜಾಸ್ತಿ ಇರುವುದರಿಂದ ಮಿತವಾಗಿ ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...