alex Certify ಚಳಿಗಾಲದಲ್ಲಿ ಅವಶ್ಯವಾಗಿ ಸೇವಿಸಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಅವಶ್ಯವಾಗಿ ಸೇವಿಸಿ ಈ ಆಹಾರ

ಚಳಿಗಾಲದಲ್ಲಿ ಹೊರಗಿನ ವಾತಾವರಣ ತಂಪಾಗಿರುವುದ್ರಿಂದ ದೇಹ ಕೂಡ ತಂಪಾಗಿರುತ್ತದೆ. ಇದ್ರಿಂದಾಗಿ ಶೀತ-ಕೆಮ್ಮು, ಕಫ, ಜ್ವರ, ಚರ್ಮ ಒಣಗುವ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ದೇಹವನ್ನು ಬೆಚ್ಚಗಿಡುವ ಕೆಲವೊಂದು ಆಹಾರವನ್ನು ಚಳಿಗಾಲದಲ್ಲಿ ಅವಶ್ಯವಾಗಿ ತಿನ್ನಬೇಕಾಗುತ್ತದೆ.

ರಾಗಿ : ಚಳಿಗಾಲದಲ್ಲಿ ರಾಗಿ ಸೇವನೆ ಮಾಡಬೇಕು. ಇದ್ರಲ್ಲಿ ಮೆಗ್ನೀಸಿಯಂ, ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಬಿ, ಆಂಟಿಆಕ್ಸಿಡೆಂಟ್ ಹಾಗೂ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ದಿನಪೂರ್ತಿ ದೇಹಕ್ಕೆ ಶಕ್ತಿ ನೀಡುತ್ತದೆ.

ಬಾದಾಮಿ : ಚಳಿಗಾಲದಲ್ಲಿ ವಿಟಮಿನ್ ಯುಕ್ತ ಬಾದಾಮಿಯನ್ನು ಸೇವನೆ ಮಾಡಬೇಕು. ಬೆಳಿಗ್ಗೆ ಜೇನುತುಪ್ಪದ ಜೊತೆ ಬಾದಾಮಿ ತಿನ್ನುವುದ್ರಿಂದ ಅನೇಕ ರೋಗ ದೂರವಾಗುತ್ತದೆ. ಮಲಬದ್ಧತೆ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

ಶುಂಠಿ : ಚಳಿಗಾಲದಲ್ಲಿ ಪ್ರತಿ ದಿನ ಶುಂಠಿ ರಸ ಅಥವಾ ಶುಂಠಿ ಟೀ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದ್ರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.

ದಾಲ್ಚಿನಿ : ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸಿ ದೇಹವನ್ನು ಚಳಿಯಿಂದ ರಕ್ಷಿಸುವ ಕೆಲಸವನ್ನು ದಾಲ್ಚಿನಿ ಮಾಡುತ್ತದೆ. ದಾಲ್ಚಿನಿಯನ್ನು ಆಹಾರ, ಟೀ, ಕಾಫಿ ಅಥವಾ ಬಿಸಿ ನೀರಿನೊಂದಿಗೆ ಸೇವನೆ ಮಾಡಬೇಕು.

ಕಡಲೆಕಾಯಿ : ಖನಿಜ, ಕ್ಯಾಲ್ಸಿಯಂ ಸೇರಿದಂತೆ ಕ್ಯಾರೋಟಿನ್ ಕಡಲೆಕಾಯಿಯಲ್ಲಿರುವುದ್ರಿಂದ ಚಳಿಗಾಲದಲ್ಲಿ ಇದನ್ನು ತಿನ್ನಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...