ಚಳಿಗಾಲದಲ್ಲಿ ತ್ವಚೆಯ ಸಮಸ್ಯೆಗಳು ಹೆಚ್ಚು. ತ್ವಚೆ ತೇವಾಂಶ ಕಳೆದುಕೊಳ್ಳುವುದು, ಒಣಗಿದಂತೆ ಕಾಣುವುದು ಹೀಗೆ ಹಲವು ಸಮಸ್ಯೆಗಳು ಎದುರಾಗುತ್ತವೆ.
ಇದಕ್ಕೆ ಮನೆಯಲ್ಲಿಯೇ ಸಿಗುವ ಕೆಲವು ಪದಾರ್ಥಗಳಿಂದ ಫೇಸ್ ಪ್ಯಾಕ್ ತಯಾರಿಸಿ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಇಲ್ಲಿವೆ ಕೆಲ ಫೇಸ್ ಪ್ಯಾಕ್ ಗಳ ಉಪಯೋಗ.
ಹಾಲಿನ ಮಾಸ್ಕ್
ಹಾಲಿನ ಕೆನೆ ಹಾಗೂ ಸ್ವಲ್ಪ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10-15 ನಿಮಿಷದ ನಂತರ ಪ್ಯಾಕ್ ತೆಗೆಯಿರಿ. ಇದು ತ್ವಚೆಗೆ ತಾಜಾತನದ ಅನುಭೂತಿ ನೀಡುವ ಜೊತೆಗೆ ಚಳಿಗಾಲದ ಚರ್ಮದ ತೊಂದರೆಗಳನ್ನು ತೊಡೆದು ಹಾಕುತ್ತದೆ.
ಬೆಣ್ಣೆಹಣ್ಣಿನ ಮಾಸ್ಕ್
ಬೆಣ್ಣೆಹಣ್ಣಿನ ಒಳಗಿನ ಭಾಗವನ್ನು ತೆಗೆದು ಅದನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಚಳಿಗಾಲದ ಒಣಗುವಿಕೆಯನ್ನು ತಡೆಯಲು ಹಾಗೂ ಚರ್ಮಕ್ಕೆ ಎಲ್ಲಾ ರೀತಿಯ ವಿಟಮಿನ್ ಮತ್ತು ಪೋಷಣೆಯನ್ನು ನೀಡುವಲ್ಲಿ ಇದು ಸಹಕಾರಿ.
ಜೇನಿನ ಮಾಸ್ಕ್
ಜೇನು ಒಂದೆರಡು ಚಮಚ ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಒಂದು ಚಮಚ ಸೇರಿಸಿ. ರೋಸ್ ವಾಟರ್ ಸೇರಿಸದೆಯೂ ಹಾಗೆಯೇ ಜೇನನ್ನೂ ಮುಖಕ್ಕೆ ಹಚ್ಚಿಕೊಳ್ಳಬಹುದು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆದರೆ ಉತ್ತಮ ಪ್ರಯೋಜನ ಪಡೆದುಕೊಳ್ಳಬಹುದು.
ಮೊಟ್ಟೆ ಬಿಳಿಲೋಳೆಯ ಮಾಸ್ಕ್
ಮೊಟ್ಟೆಯ ಬಿಳಿ ಲೋಳೆಯನ್ನು ಚೆನ್ನಾಗಿ ಬೀಟ್ ಮಾಡಿ ಅದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಈ ಮಾಸ್ಕ್ ಮುಖವನ್ನು ರಿಫ್ರೆಶ್ ಮಾಡುವುದಲ್ಲದೆ, ಆರೋಗ್ಯಯುತವಾಗಿ ಕಂಗೊಳಿಸುವಂತೆ ಮಾಡುತ್ತದೆ.