ಚಲಿಸುತ್ತಿದ್ದ ಗೂಡ್ಸ್ ರೈಲಲ್ಲಿ ತೈಲ ಕದ್ದ ಜನ ! ವಿಡಿಯೋ ವೈರಲ್ 05-12-2022 11:12AM IST / No Comments / Posted In: Latest News, India, Live News, Crime News ಕಳ್ಳತನಕ್ಕಿಳಿಯೋರು ಎಂಥ ಕೆಲಸ ಬೇಕಾದ್ರೂ ಮಾಡ್ತಾರೆ. ಯಾವುದೇ ವಸ್ತುವನ್ನು ಬೇಕಾದ್ರೂ ಕ್ಷಣ ಮಾತ್ರದಲ್ಲಿ ಕದ್ದುಬಿಡ್ತಾರೆ. ಬಿಹಾರದಲ್ಲಿ ಚಲಿಸುತ್ತಿದ್ದ ಗೂಡ್ಸ್ ರೈಲಿನಲ್ಲೇ ಜನ ತೈಲ ಕದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಜನರ ಮನಸ್ಥಿತಿ ಎಂಥದ್ದು ಎಂಬುದನ್ನ ತೋರಿಸಿದೆ. ಕಳ್ಳರು ಪಾಟ್ನಾದ ಆಡಳಿತಾತ್ಮಕ ಉಪ-ವಿಭಾಗವಾದ ಬಿಹ್ತಾ ಮೂಲಕ ಹಾದುಹೋಗುವ ತೈಲ ಟ್ಯಾಂಕರ್ ರೈಲನ್ನು ಗುರಿಯಾಗಿಸಿಕೊಂಡು ಚಲಿಸುತ್ತಿದ್ದ ರೈಲಲ್ಲೇ ತೈಲ ಕದ್ದಿದ್ದಾರೆ. ಪ್ರತ್ಯಕ್ಷದರ್ಶಿಗಳು ಕಳ್ಳತನದ ವಿಡಿಯೋ ಮಾಡಿದ್ದು ಸ್ಥಳೀಯರು ತಮ್ಮ ಬಕೆಟ್‌ಗಳಲ್ಲಿ, ಕ್ಯಾನ್ ಗಳಲ್ಲಿ ಎಣ್ಣೆಯನ್ನು ತುಂಬಿಕೊಳ್ಳಲು ರೈಲ್ವೆ ಸೇತುವೆಯ ಮೇಲೆ ಟ್ಯಾಂಕರ್ ಜೊತೆಗೆ ಓಡುತ್ತಿದ್ದಾರೆ. ಗೂಡ್ಸ್ ರೈಲು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ತೈಲ ಡಿಪೋಗೆ ಹೋಗುತ್ತಿತ್ತು ಎಂದು ವರದಿಯಾಗಿದೆ. ಆಗ ಕಳ್ಳರು ತೈಲವನ್ನು ಕದ್ದಿದ್ದಾರೆ. Bihar: Thieves steal oil from moving train in Bihta to close out 2022 on a high. pic.twitter.com/eKBPSp5HPR — Krishna Kakani (@krishnakakani08) December 4, 2022