ಚಲನಚಿತ್ರ ನಟ ದಿವಂಗತ ಎಂ.ಪಿ. ಶಂಕರ್ ಅವರ ಪತ್ನಿ ಮಂಜುಳಾ ವಿಧಿವಶರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೊಳಗಾಗಿದ್ದ ಮಂಜುಳಾ ಅವರಿಗೆ ಅಂಜಿಯೋಗ್ರಾಮ್ ಮಾಡಿಸಲಾಗಿತ್ತು. ಬಳಿಕ ಬೈಪಾಸ್ ಸರ್ಜರಿ ನಡೆಸಲಾಗಿತ್ತು.
ಆದರೆ ಮಂಗಳವಾರದಂದು ಅವರಿಗೆ ಮತ್ತೆ ಹೃದಯಾಘಾತವಾಗಿದ್ದು, ವಿಧಿವಶರಾಗಿದ್ದಾರೆ. ಮಂಜುಳಾ ಅವರ ಅಂತ್ಯಕ್ರಿಯೆಯನ್ನು ಮೈಸೂರಿನ ವಿದ್ಯಾರಣ್ಯಪುರಂ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ.