ಕೆಲವರ ಚರ್ಮದಲ್ಲಿ ವಿಷ ಅಂಶ ಹೆಚ್ಚಾಗಿರುತ್ತದೆ. ಇದರಿಂದ ಕೆಲವರ ಚರ್ಮವು ಅತ್ಯಂತ ಸೂಕ್ಷ್ಮವಾಗಿ, ಅಲ್ಲಲ್ಲಿ ಕೆಂಪು ಬಣ್ಣದ ಗುಳ್ಳೆಗಳಾಗುತ್ತದೆ. ಕೆಲವರು ಇದನ್ನು ಮೇಕಪ್ ನಿಂದ ಕವರ್ ಮಾಡುತ್ತಾರೆ. ಆದರೆ ಇದು ಮತ್ತಷ್ಟು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಮನೆ ಮದ್ದಿನಿಂದ ಈ ವಿಷ ಅಂಶವನ್ನು ಹೊರಹಾಕಬಹುದು. ಆದರೆ ಆ ವೇಳೆ ಈ ಆಹಾರಗಳನ್ನು ಸೇವಿಸಬಾರದು.
*ಡೈರಿ ಉತ್ಪನ್ನಗಳು ಚರ್ಮ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆ ಆಹಾರಗಳನ್ನು ಸೇವಿಸಿದರೆ ಚರ್ಮವು ಒಡೆಯಲು ಕಾರಣವಾಗಬಹುದು. ಡೈರಿ ಉತ್ಪನ್ನಗಳಿಂದ ಲೋಳೆಯ ರಚನೆಯಾಗುತ್ತದೆ. ಇದರಿಂದ ವಿಷ ಅಂಶ ಹೊರ ಹೋಗುವುದಿಲ್ಲ. ಹಾಗಾಗಿ ವಿವಿಧ ಮನೆಮದ್ದುಗಳನ್ನು ಅನುಸರಿಸುತ್ತಿರುವಾಗ ಇದನ್ನು ತಪ್ಪಿಸಿ.
*ನಿಮ್ಮ ಚರ್ಮದಿಂದ ವಿಷ ಅಂಶವನ್ನು ಹೊರಹಾಕುವಾಗ ಸಕ್ಕರೆಯನ್ನು ಸೇವಿಸಬಾರದು. ಇದರಿಂದ ದೇಹ ಮತ್ತು ಚರ್ಮದಲ್ಲಿ ತೊಂದರೆಯಾಗಬಹುದು. ಸಕ್ಕರೆ ಪ್ರೋಟೀನ್ ಮತ್ತು ಕೊಬ್ಬಿನೊಂದಿಗೆ ಸೇರಿ ಸುಕ್ಕುಗಳು ಮೂಡಲು ಕಾರಣವಾಗಬಹುದು.
ನೀವು ತ್ವಚೆಯನ್ನು ಡಿಟಾಕ್ಸ್ ಮಾಡುವಾಗ ವಿವಿಧ ಮನೆಮದ್ದುಗಳನ್ನು ಅನುಸರಿಸುತ್ತಿರುವಾಗ ಇದನ್ನು ತಪ್ಪಿಸಿ. ಇಲ್ಲವಾದರೆ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಉಂಟುಮಾಡುತ್ತದೆ. ಇದು ದಣಿವು ಮತ್ತು ಆಯಾಸವಾದಂತೆ ಕಂಡು ಮುಖ ಕಳೆಗುಂದಿದಂತಾಗುತ್ತದೆ.