alex Certify ಚರ್ಮದ ಸೌಂದರ್ಯಕ್ಕೆ ಹಾಗೂ ಕೂದಲಿನ ಆರೋಗ್ಯಕ್ಕೆ ‘ಹೆಸರುಬೇಳೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಸೌಂದರ್ಯಕ್ಕೆ ಹಾಗೂ ಕೂದಲಿನ ಆರೋಗ್ಯಕ್ಕೆ ‘ಹೆಸರುಬೇಳೆ’

ಹೆಸರುಬೇಳೆಯಿಂದ ಕೇವಲ ಅಡುಗೆ ಮಾಡಲು ಮಾತ್ರವಲ್ಲ ಅದರಿಂದ ನಮ್ಮ ಸ್ಕಿನ್ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಯಿಂದ ಚರ್ಮದ ಮೇಲಾಗುವ ಸನ್ ಟ್ಯಾನ್, ಕಲೆಗಳು ಮತ್ತು ಮೊಡವೆಗಳಿಗೆ ಉತ್ತಮವಾದ ಪರಿಹಾರವನ್ನು ನೀಡುತ್ತದೆ.

ಚರ್ಮದ ಸೌಂದರ್ಯಕ್ಕೆ :

ಒಂದು ಚಮಚ ಆಲಿವ್ ಎಣ್ಣೆ ಮತ್ತು ½ ಚಮಚ ಹೆಸರುಬೇಳೆ ಪುಡಿಯನ್ನು ಮಿಶ್ರ ಮಾಡಿಕೊಂಡು, ತ್ವಚೆಗೆ ಮತ್ತು ಕೈ ಕಾಲುಗಳಿಗೆ ಅಪ್ಲೈ ಮಾಡಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ 2 ಬಾರಿ ಹೀಗೆ ಮಾಡಿಕೊಂಡಲ್ಲಿ ಚರ್ಮದ ಕಾಂತಿಯು ಇಮ್ಮಡಿಗೊಳ್ಳುತ್ತದೆ.

½ ಚಮಚ ಹೆಸರುಬೇಳೆ ಪುಡಿ ಮತ್ತು ಒಂದು ಚಮಚ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ, ಮುಖದ ತ್ವಚೆಯ ಮೇಲೆ ಲೇಪಿಸಿ 5-10 ನಿಮಿಷ ಹಾಗೆಯೇ ಬಿಟ್ಟು, ವಾಶ್ ಮಾಡಿಕೊಳ್ಳಿ. ವಾರದಲ್ಲಿ ಒಂದು ಬಾರಿ ಹೀಗೆ ಮಾಡುವುದರಿಂದ ಮೊಡವೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು.

ಕೂದಲಿನ ಆರೋಗ್ಯಕ್ಕೆ :

½ ಚಮಚ ಹೆಸರುಬೇಳೆ ಪುಡಿ, 2 ಚಮಚ ಆಮ್ಲ ರಸದೊಂದಿಗೆ ಬೆರೆಸಿ, ಕೂದಲಿನ ಸ್ಕಾಲ್ಪ್ ಗೆ ಅಪ್ಲೈ ಮಾಡಿ. ಒಂದು ಗಂಟೆಯ ನಂತರ ಸೀಗೆಕಾಯಿ ಪುಡಿಯನ್ನು ಬಳಸಿ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಬೇಳೆಯಲ್ಲಿರುವ ಪ್ರೋಟೀನ್ಸ್ ಕೂದಲಿನ ಬೇರುಗಳಿಗೆ ಶಕ್ತಿ ನೀಡಿ, ಆರೋಗ್ಯವಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

2 ಚಮಚ ಬೇವಿನ ರಸದೊಂದಿಗೆ ½ ಚಮಚ ಹೆಸರುಬೇಳೆ ಪುಡಿಯನ್ನು ಮಿಶ್ರಣ ಮಾಡಿ, ತಲೆಯ ಕೂದಲಿನ ಭಾಗಕ್ಕೆ ಲೇಪಿಸಿ 20 ನಿಮಿಷ ಹಾಗೆಯೇ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಬೇವಿನಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಲ್ ಅಂಶವು ತಲೆಹೊಟ್ಟಿನಿಂದ ಮುಕ್ತಿಗೊಳಿಸಿ, ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...