ತಮಗೆ ವಯಸ್ಸಾಗಿದೆ ಎಂದು ತೋರಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಹಾಗಾಗಿ ಅದಕ್ಕಾಗಿ ಹಲವು ಬಗೆಯ ಮನೆಮದ್ದನ್ನು, ವ್ಯಾಯಾಮಗಳನ್ನು ಮಾಡುತ್ತಾರೆ. ನಿಮ್ಮ ಚರ್ಮ ಬೇಗ ವಯಸ್ಸಾದಂತೆ ಕಾಣುವುದನ್ನು ತಡೆಯಲು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಲು ಈ ಜ್ಯೂಸ್ ಗಳನ್ನು ಸೇವಿಸಿ.
*ಆಂಟಿ ಆಕ್ಸಿಡೆಂಟ್ ಜ್ಯೂಸ್ : ಈ ರಸವನ್ನು ತಯಾರಿಸಲು ಪಾಲಕ್ ಸೊಪ್ಪು, ದ್ರಾಕ್ಷಿ, ಸೇಬು, ಕಿತ್ತಳೆ ಸೇರಿಸಿ. ಇದು ಮಾಲಿನ್ಯ, ಒತ್ತಡ, ಸೂರ್ಯನ ಕಿರಣ ಮತ್ತು ಕಳಪೆ ಆಹಾರದಿಂದ ಉಂಟಾಗುವ ಚರ್ಮದ ಹಾನಿಯನ್ನು ತಡೆಯುತ್ತದೆ.
*ಚರ್ಮವನ್ನು ಶುದ್ಧೀಕರಿಸುವ ಜ್ಯೂಸ್ : ಇದನ್ನು ತಯಾರಿಸಲು ಕ್ಯಾರೆಟ್, ಸೇಬು, ಮತ್ತು ಶುಂಠಿಯನ್ನು ಬಳಸಲಾಗುತ್ತದೆ. ಇದು ರಕ್ತ ಸಂಚಾರ ಹೆಚ್ಚಿಸಿ ಚರ್ಮವನ್ನು ಶುದ್ದೀಕರಿಸಿ ಒಳಗಿನಿಂದ ಹೊಳೆಯುವಂತೆ ಮಾಡುತ್ತದೆ.
*ಪ್ರೋಟೀನ್ ಶೇಕ್ : ಇದನ್ನು ಬಾದಾಮಿ ಹಾಲು, ಅಕ್ಕಿ ಹಾಲು, ಮೊಸರು, ಬೆರಿ ಹಣ್ಣುಗಳು, ಬಾಳೆಹಣ್ಣು, ರಸ್ಬೆರಿ, ಪ್ರೋಟೀನ್ ಪುಡಿ ಸೇರಿಸಿ ತಯಾರಿಸುತ್ತಾರೆ. ಇದನ್ನು ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.