ತೈಲ ಚರ್ಮದ ರಂಧ್ರಗಳ ಮೇಲೆ ಪರಿಣಾಮ ಬೀರಿ ಮೊಡವೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬ ಭಯ ಹಲವರಲ್ಲಿದೆ.
ಆದರೆ ಚರ್ಮಕ್ಕೆ ರಕ್ಷಣಾತ್ಮಕ ಪದರವನ್ನು ರೂಪಿಸಲು ನಮ್ಮ ಚರ್ಮಕ್ಕೆ ತೈಲ ಮಸಾಜ್ ಗಳು ಬೇಕಾಗುತ್ತದೆ. ಸರಿಯಾದ ತೈಲ ಮಿಶ್ರಣವನ್ನು ಬಳಸುವುದರಿಂದ ಚರ್ಮಕ್ಕೆ ಯಾವುದೇ ಸಮಸ್ಯೆ ಕಾಡುವುದಿಲ್ಲ. ಹಾಗಾದ್ರೆ ಮನೆಯಲ್ಲಿಯೇ ತಯಾರಿಸಿದ ಈ ಎಣ್ಣೆಯಿಂದ ಮುಖಕ್ಕೆ ರಾತ್ರಿ ಮಸಾಜ್ ಮಾಡಿ ನೋಡಿ.
ಮನೆಯಲ್ಲಿಯೇ ತಯಾರಿಸಿದ ಈ ತೈಲ ಜೋತುಬಿದ್ದಿರುವ ಚರ್ಮ ಟೈಟ್ ಆಗಲು ಸಹಕಾರಿ. ಮತ್ತು ಇದು ಚರ್ಮದ ಕಲೆಗಳು ಮತ್ತು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಒಂದು ಪಾತ್ರೆಯಲ್ಲಿ ವಿಟಮಿನ್ ಸಿ ಎಣ್ಣೆ, ಅಲೋವೆರಾ ಜೆಲ್, ವಿಟಮಿನ್ ಇ ಎಣ್ಣೆ ಮತ್ತು 5 ಹನಿ ಸುಗಂಧ ದ್ರವ್ಯ, ½ ಚಮಚ ಎಸೆನ್ಸಿಯಲ್ ಆಯಿಲ್ ಚೆನ್ನಾಗಿ ಮಿಶ್ರಣ ಮಾಡಿ ಒಂದು ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ರಾತ್ರಿಯ ವೇಳೆ ಮುಖಕ್ಕೆ ಹಚ್ಚಿ ಬೆಳಿಗ್ಗೆ ವಾಶ್ ಮಾಡಿ. ಇದರಿಂದ ಮುಖ ಕಾಂತಿಯುತವಾಗುತ್ತದೆ.