
ಸುಂದರವಾದ ಚರ್ಮವನ್ನು ಪಡೆಯಲು ಹುಡುಗಿಯರು ಶ್ರಮಿಸುತ್ತಾರೆ. ದುಬಾರಿ ಹಣ ನೀಡಿ ಕೆಮಿಕಲ್ ಯುಕ್ತ ಸೌಂದರ್ಯ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುತ್ತಾರೆ. ಅದರ ಬದಲು ಚರ್ಮದ ಕಾಂತಿಯನ್ನು ಹೆಚ್ಚಿಸಲು ಈ ನೈಸರ್ಗಿಕ ವಿಧಾನಗಳನ್ನು ಬಳಸಿ.
½ ಕಪ್ ಶುದ್ಧ ಅಲೋವೆರಾ ಜೆಲ್ ಗೆ 1 ½ ಕಪ್ ನಿಂಬೆ ರಸ, 2 ಚಮಚ ಜೇನುತುಪ್ಪ, ಇವಿಷ್ಟನ್ನು ಮಿಕ್ಸ್ ಮಾಡಿ ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ 2 ವಾರಗಳ ಕಾಲ ರೆಫ್ರಿಜರೇಟರ್ ನಲ್ಲಿಡಿ. ಆನಂತರ ಮುಖವನ್ನು ಚೆನ್ನಾಗಿ ತೊಳೆದು ಈ ಕ್ರೀಂನ್ನು ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಬಳಿಕ ಮಾಯಿಶ್ಚರೈಸರ್ ಹಚ್ಚಿ.
ರಾತ್ರಿಯ ವೇಳೆ ಮಲಗುವ ಸಮಯದಲ್ಲಿ ಪ್ರತಿದಿನ ಹೀಗೆ ಮಾಡಿ. ಇದರಿಂದ 3 ವಾರಗಳಲ್ಲಿ ನಿಮ್ಮ ಮುಖದ ಕಾಂತಿ ಹೆಚ್ಚಾಗುತ್ತದೆ.