ಚರ್ಮವು ಆರೋಗ್ಯವಾಗಿರಲು ಉತ್ತಮವಾದ ಟೋನರ್ ನ್ನು ಬಳಸುವುದು ಉತ್ತಮ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಮಿಕಲ್ ಯುಕ್ತ ಟೋನರ್ ಗಳನ್ನು ಬಳಸುವ ಬದಲು ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳಿಂದ ಟೋನರ್ ತಯಾರಿಸಿ ಬಳಸಿದರೆ ಚರ್ಮದ ಕಾಂತಿ ಮತ್ತಷ್ಟು ಹೆಚ್ಚಾಗುತ್ತದೆ.
ಮನೆಯಲ್ಲಿ ಅಲೋವೆರಾ ಮತ್ತು ರೋಸ್ ವಾಟರ್ ಬಳಸಿ ಟೋನರ್ ತಯಾರಿಸಿ. ಇದನ್ನು ಬಳಸುವುದರಿಂದ ಮೊಡವೆ, ಬಿಸಿಲಿನಿಂದಾಗುವ ಚರ್ಮದ ಹಾನಿ ಕಡಿಮೆಯಾಗುತ್ತದೆ. ಇದು ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.
ಅಲೋವೆರಾ ಎಲೆಗಳಿಂದ ಜೆಲ್ ನ್ನು ತೆಗೆದುಕೊಂಡು ಅದಕ್ಕೆ ತಾಜಾ ಗುಲಾಬಿ ದಳದ ಪೇಸ್ಟ್ ಮಿಕ್ಸ್ ಮಾಡಿದ ನೀರನ್ನು ಮಿಕ್ಸ್ ಮಾಡಿ ಬಾಟಲಿನಲ್ಲಿ ಸ್ಟೋರ್ ಮಾಡಿ ಫ್ರಿಜ್ ನಲ್ಲಿ ಇಡಿ. ಇದನ್ನು ಮುಖಕ್ಕೆ ಟೋನರ್ ಆಗಿ ಬಳಸುವುದರಿಂದ ಚರ್ಮದ ಆರೋಗ್ಯ ಹೆಚ್ಚಾಗುತ್ತದೆ.