ಬಂದೂಕುಧಾರಿಯೊಬ್ಬ ಚರ್ಚ್ ಒಳಗೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ, ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ಭಯಾನಕ ಘಟನೆ ಸೋಮವಾರ ಸಂಜೆಯ ವೇಳೆಯಲ್ಲಿ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಸಾವನ್ನಪ್ಪಿರುವ ಮೂವರು ಮಕ್ಕಳು ಗುಂಡಿನ ದಾಳಿ ನಡೆಸಿದ ಬಂದೂಕುಧಾರಿಯ ಸ್ವಂತ ಮಕ್ಕಳೆಂದು ತಿಳಿದು ಬಂದಿದೆ. ಆರೋಪಿಯು ತನ್ನ ಮೂವರು ಮಕ್ಕಳು ಸೇರಿದಂತೆ, ಚರ್ಚ್ ನಲ್ಲಿದ್ದ ಮತ್ತೋರ್ವ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ. ನಂತರ ತನ್ನನ್ನು ತಾನೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆಂದು, ಸ್ಯಾಕ್ರಮೆಂಟೋ ಕೌಂಟಿ ಷರೀಫ್ಸ್ ವಕ್ತಾರ ಸಾರ್ಜೆಂಟ್ ರಾಡ್ ಗ್ರಾಸ್ಮನ್ ತಿಳಿಸಿದ್ದಾರೆ.
BIG NEWS: ಕಾಂಗ್ರೆಸ್ ರಾಜಕೀಯ ಹಿತಾಸಕ್ತಿಗೆ ಸಂಕಷ್ಟಕ್ಕೀಡಾದ ಜನರು; ಪಾದಯಾತ್ರೆ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ
ನಾಲ್ಕನೇ ವ್ಯಕ್ತಿಯ ಗುರುತು ಇನ್ನು ಪತ್ತೆ ಹಚ್ಚಬೇಕಾಗಿದೆ ಎಂದು ಗ್ರಾಸ್ ಮನ್ ತಿಳಿಸಿದ್ದು, ನಗರದ ಅರ್ಡೆನ್-ಆರ್ಕೇಡ್ ಪ್ರದೇಶದ ವೈಡಾ ವೇನಲ್ಲಿರುವ ಚರ್ಚ್ನಲ್ಲಿ ಈ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಚರ್ಚ್ ನೊಳಗೆ ಸೋಮವಾರ ಸಂಜೆ ಸುಮಾರು 05:07 ರ ಸಮಯದಲ್ಲಿ ಏಕಾಏಕಿ ಗುಂಡಿನ ದಾಳಿಯ ಸದ್ದು ಕೇಳಿಬಂದಿರುವುದಾಗಿ ಚರ್ಚ್ ನ ಕೆಲಸಗಾರರು ತಿಳಿಸಿದ್ದು, ಸದ್ದು ಬಂದಾಕ್ಷಣ ಚರ್ಚ್ ಕಟ್ಟಡದಿಂದ ಹೊರ ಬಂದ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಭದ್ರತಾ ಸಿಬ್ಬಂದಿಗಳು ಹಾಗೂ ರಕ್ಷಣಾ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಪ್ರದೇಶವನ್ನು ಸುತ್ತುವರಿದಿದ್ದರು. ಆದರೆ ಬಂದೂಕುಧಾರಿ ವ್ಯಕ್ತಿ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.