alex Certify ಚರ್ಚೆಗೆ ಕಾರಣವಾಗಿದೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ಈ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಚೆಗೆ ಕಾರಣವಾಗಿದೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ಈ ತೀರ್ಪು

ಕೇರಳದ ಕೋಝಿಕ್ಕೋಡ್‌ ಸೆಷನ್ಸ್‌ ನ್ಯಾಯಾಲಯವೊಂದು ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಅಚ್ಚರಿಯ ತೀರ್ಪು ನೀಡಿದೆ. ಸಂತ್ರಸ್ಥೆಯ ಫೋಟೊಗಳನ್ನು ನೋಡಿದ ಕೋರ್ಟ್‌, ಆಕೆ ಕಾಮೋತ್ತೇಜಕ ಬಟ್ಟೆಗಳನ್ನು ಧರಿಸುತ್ತಾಳೆ, ಹಾಗಾಗಿ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿದೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ ಆರೋಪಿ ಲೇಖಕ ಸಿವಿಕ್‌ ಚಂದ್ರನ್‌ಗೆ ಜಾಮೀನು ಸಹ ನೀಡಿದೆ.

ನ್ಯಾಯಾಲಯದ ಈ ಆದೇಶದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಯಾಗ್ತಿದೆ. ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಸಂತ್ರಸ್ಥೆಯ ಚಾರಿತ್ರ್ಯದ ಬಗ್ಗೆ ನ್ಯಾಯಾಲಯ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದೆ, ಜೊತೆಗೆ ಆಕೆಯ ಖಾಸಗಿ ವಿಚಾರದಲ್ಲಿ ಮೂಗು ತೂರಿಸಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

“ಯುವತಿ ಕಾಮೋದ್ರೇಕಗೊಳಿಸುವ ಬಟ್ಟೆ ಧರಿಸಿದ್ದರೆ ಆಕೆಯ ಮೇಲೆ ಆಗಿರುವ ಲೈಂಗಿಕ ಕಿರುಕುಳವನ್ನು ಪರಿಗಣಿಸಲು ಸಾಧ್ಯವಿಲ್ಲ. ಆಕೆಯ ಬಟ್ಟೆಯೇ ಉದ್ರೇಕಗೊಳಿಸುವಂತಿದೆ” ಎಂದು ಹೇಳುವ ಮೂಲಕ ಸೆಷನ್ಸ್‌ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಆರೋಪಿ ಸಿವಿಕ್‌ ಚಂದ್ರನ್‌ 74 ವರ್ಷದ ಲೇಖಕ. ಕಿರಿಯ ಬರಹಗಾರ್ತಿಯೊಬ್ಬರು ಚಂದ್ರನ್‌ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆತ ಸೆಷನ್ಸ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಆರೋಪಿ ಚಂದ್ರನ್‌ ಪರ ವಕೀಲರು, ದೂರು ದಾಖಲಿಸಿದ್ದ ಮಹಿಳೆಯ ಹಲವು ಫೋಟೊಗಳನ್ನು ನ್ಯಾಯಾಲಯದೆದುರು ಹಾಜರುಪಡಿಸಿದ್ದರು. “ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ಫೋಟೊಗಳನ್ನು ನೋಡಿದರೆ ಆಕೆ ಕಾಮೋದ್ರೇಕಗೊಳಿಸುವ ಬಟ್ಟೆಗಳನ್ನು ತೊಡುತ್ತಾಳೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಆಕೆ ಧರಿಸಿರುವ ಹಲವು ಬಟ್ಟೆಗಳು ಅಶ್ಲೀಲವಾಗಿದ್ದು ಲೈಂಗಿಕತೆಯನ್ನು ಕೆರಳಿಸುವಂತಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ 354A ಅಡಿಯಲ್ಲಿ ಪ್ರಕರಣವನ್ನು ಪರಿಗಣಿಸಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಆರೋಪಿಯ ವಯಸ್ಸನ್ನು ಗಮನಿಸಿದರೆ ದೈಹಿಕವಾಗಿ ದೃಢವಾಗಿಲ್ಲ. ಆಕೆಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಖಾಸಗಿ ಅಂಗಗಳನ್ನು ಸ್ಪರ್ಶಿಸಿರುವ ಸಾಧ್ಯತೆಯಿಲ್ಲ ಎಂದು ಸಹ ನ್ಯಾಯಾಲಯ ಹೇಳಿದೆ.

2020ರ ಫೆಬ್ರವರಿಯಲ್ಲಿ ನಡೆದಿರುವ ಘಟನೆ ಇದು. ಕವಿತಾ ವಾಚನ ಕಾರ್ಯಕ್ರಮವೊಂದರಲ್ಲಿ ಸಿವಿಕ್‌ ಚಂದ್ರನ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳೆ ಪ್ರಕರಣ ದಾಖಲಿಸಿದ್ದರು. ಆದರೆ ಈ ಆರೋಪವನ್ನು ತಳ್ಳಿಹಾಕಿದ್ದ ಚಂದ್ರನ್‌ ತಮ್ಮ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ವಾದಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...