ರಾಜ್ಯದಲ್ಲಿ ಈ ಬಾರಿ ಅದ್ದೂರಿ ದಸರಾ ಮಹೋತ್ಸವ ನಡೆಯುತ್ತಿದ್ದು, ಮೈಸೂರಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಡ ಹಬ್ಬಕ್ಕೆ ಈಗಾಗಲೇ ಚಾಲನೆ ನೀಡಿದ್ದಾರೆ. ಇದರ ಮಧ್ಯೆ ಫೋಟೋ ಒಂದು ಪರ – ವಿರೋಧದ ಚರ್ಚೆಗಳಿಗೆ ಕಾರಣವಾಗುವ ಮೂಲಕ ಕುತೂಹಲ ಮೂಡಿಸಿದೆ.
ಈ ಬಾರಿ ದಸರಾ ಉದ್ಘಾಟನಾ ಕಾರ್ಯಕ್ರಮ ಹಾಗೂ ಮೈಸೂರು ಅರಮನೆಯಲ್ಲಿ ದರ್ಬಾರ್ ನಡೆಯುವ ಮುನ್ನ ನಡೆದ ಸಮಾರಂಭಗಳಲ್ಲಿ ಭಾಗವಹಿಸಿದ್ದ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ರಾಜವಂಶಸ್ಥರಾದ ಪ್ರಮೋದಾ ದೇವಿ ಅವರ ಪಾದಕ್ಕೆ ನಮಸ್ಕರಿಸಿದ್ದರು. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸುಧಾಮೂರ್ತಿ, ಪ್ರಮೋದಾ ದೇವಿಯವರ ಪಾದಕ್ಕೆ ನಮಸ್ಕಾರ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಲವರು, ರಾಜಪ್ರಭುತ್ವ ಕೊನೆಗೊಂಡು ದಶಕಗಳೇ ಕಳೆದಿವೆ. ಆದರೆ ರಾಜವಂಶಸ್ಥರಿಗೆ ತಲೆಬಾಗಿ ನಮಸ್ಕರಿಸುವ ಪರಿಪಾಠ ನಿಂತಿಲ್ಲ ಎಂದು ಟೀಕಿಸಿದ್ದರು.
ಆದರೆ ಮತ್ತಷ್ಟು ಮಂದಿ ಸುಧಾಮೂರ್ತಿಯವರ ಬೆಂಬಲಕ್ಕೆ ನಿಂತಿದ್ದು, ಇದರಲ್ಲಿ ತಪ್ಪೇನಿದೆ. ಸುಧಾಮೂರ್ತಿಯವರು ಕೋಟಿಗಟ್ಟಲೆ ಆಸ್ತಿ ಹೊಂದಿದ್ದರೂ ಸಹ ನಮ್ಮ ರಾಜ್ಯದ ಪರಂಪರೆಗೆ ಗೌರವ ತೋರಿದ್ದಾರೆ ಎಂದು ಹೇಳಿದ್ದಾರೆ.