ಆನ್ ಲೈನ್ ನಲ್ಲಿ ಖರೀದಿಸಿದ ಹೊಸ ವಿನ್ಯಾಸದ ಪಾದರಕ್ಷೆ ನಿಮ್ಮ ಕಾಲುಗಳಿಗೆ ಹೊಂದಿಕೊಳ್ಳುತ್ತಿಲ್ಲವೇ? ಸಣ್ಣ ಪುಟ್ಟ ಬದಲಾವಣೆಗಳಿಗಾಗಿ ಇದನ್ನು ಹಿಂದಿರುಗಿಸಬೇಕಿಲ್ಲ. ನೀವೇ ಈ ಕೆಲವು ಟಿಪ್ಸ್ ಗಳನ್ನು ಪ್ರಯತ್ನಿಸಿ ನೋಡಬಹುದು.
ಪಾದರಕ್ಷೆ ನಿಮ್ಮ ಪಾದಗಳಿಂದ ತುಸು ದೊಡ್ಡದಿದ್ದರೆ ಮುಂಬಾಗದಲ್ಲಿ ಪೇಪರ್ ಉಂಡೆಯನ್ನು ಸೇರಿಸಿ. ಇದರಿಂದ ನಿಮ್ಮ ಪಾದಕ್ಕೆ ಪಾದರಕ್ಷೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಸ್ವಲ್ಪ ದೂರ ನಡೆದಾಡಿದ ಬಳಿಕ ಇದು ನಿಮ್ಮ ಪಾದಕ್ಕೆ ಫಿಟ್ ಆಗುತ್ತದೆ.
SHOCKING: ಶೌಚಗುಂಡಿ ಸ್ವಚ್ಛಗೊಳಿಸುವಾಗಲೇ ಉಸಿರುಗಟ್ಟಿ ಪೌರಕಾರ್ಮಿಕ ಸಾವು
ಹೊಸದಾಗಿ ಖರೀದಿಸಿದ ಹೀಲ್ಸ್ ಅಥವಾ ಫ್ಲಾಟ್ ಪಾದರಕ್ಷೆ ನಿಮ್ಮ ಪಾದಗಳ ಗಾತ್ರಕ್ಕಿಂತ ದೊಡ್ಡದಾಗಿದ್ದರೆ ಬಾಲ್ ಆಫ್ ಫೂಟ್ ಪ್ಯಾಡ್ ಗಳನ್ನು ಬಳಸಿ. ಲೇಸ್ ಗಳನ್ನು ಬಳಸಿ ನಿಮ್ಮ ಶೂ ಗಳನ್ನು ಬಿಗಿಯಾಗಿಸಿ. ಇದರಿಂದಲೂ ನಿಮ್ಮ ಪಾದಗಳಿಗೆ ಪಾದರಕ್ಷೆಯನ್ನು ಫಿಟ್ ಮಾಡಬಹುದು.
ಹೀಗಿದ್ದೂ ವಿಪರೀತ ದೊಡ್ಡ ಪಾದರಕ್ಷೆಯಾಗಿದ್ದರೆ ಅದನ್ನು ಹಿಂದಿರುಗಿಸುವುದು ಒಳ್ಳೆಯದು. ಅದೇ ರೀತಿ ಕಾಲಿಗೆ ಬಿಗಿಯಾಗುವ, ಕಚ್ಚುವ ಚಪ್ಪಲಿಗಳನ್ನು ಕೂಡಾ ಬಳಸದೆ ಇರುವುದು ಒಳ್ಳೆಯದು.