![](https://kannadadunia.com/wp-content/uploads/2022/12/1-1577422478.jpg)
ಹೊಸದಾಗಿ ಕೊಂಡ ಶೂ ಅಥವಾ ಚಪ್ಪಲಿ ಕಾಲಿಗೆ ಕಚ್ಚುತ್ತಿದೆಯೇ, ಅ ನೋವು ತಡೆಯಲಾರದಷ್ಟು ಕಾಡುತ್ತಿದೆಯೇ? ಇದನ್ನು ಸರಿಪಡಿಸುವುದು ಈಗ ಸುಲಭ.
ಹೊಸ ಪಾದರಕ್ಷೆ ಕಾಲುಗಳಿಗೆ ಹೊಂದಿಕೊಳ್ಳುವ ತನಕ ಎಲ್ಲಾದರೂ ಒಂದು ಕಡೆ ಉಜ್ಜಿ ಚಿಕ್ಕ ಗಾಯವನ್ನುಂಟು ಮಾಡುತ್ತದೆ. ಗುಳ್ಳೆಯಂತೆ ಅಥವಾ ಗಾಯದ ರೂಪದಲ್ಲಿರುವ ಇದಕ್ಕೆ ಆಲೋವೆರಾದ ಜೆಲ್ ಅನ್ನು ಹಚ್ಚಿ. ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದರಿಂದ ನೋವು ಕಡಿಮೆಯಾಗುತ್ತದೆ ಮತ್ತು ಗಾಯವೂ ಉಳಿಯುವುದಿಲ್ಲ.
ಅಲಿವ್ ಎಣ್ಣೆ ಗಾಯಕ್ಕೆ ಹೆಚ್ಚು ಸೂಕ್ತವಾದದ್ದು. ಇದರೊಂದಿಗೆ ಎರಡು ಹನಿ ಬಾದಾಮಿ ಎಣ್ಣೆ ಸೇರಿಸಿ ಗಾಯಕ್ಕೆ ಹಚ್ಚಿ.
ಭಾರೀ ನೋವಿದ್ದರೆ ಮೆಂಥಾಲ್ ಅಂಶವಿರುವ ಹಲ್ಲುಜ್ಜುವ ಪೇಸ್ಟ್ ಅನ್ನು ಬಳಸಿ, ಹತ್ತಿಗೆ ಪೇಸ್ಟ್ ಹಚ್ಚಿ ಗಾಯದ ಮೇಲೆ ಆವರಿಸುವಂತೆ ಮುಚ್ಚಿಡಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಜೇನು, ಬೇವಿನೆಣ್ಣೆ, ಕರ್ಪೂರ ಮತ್ತು ತೆಂಗಿನೆಣ್ಣೆ, ವ್ಯಾಸಲಿನ್ ಗಳನ್ನೂ ಹಚ್ಚಬಹುದು.