ಊಟದೊಂದಿಗೆ ಅಥವಾ ಡಯಟ್ ಫುಡ್ ಗಾಗಿ ಚಪಾತಿ ಸೇವನೆ ಮಾಡಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಚಪಾತಿಯಲ್ಲೂ ಅದೆಷ್ಟು ಉತ್ತಮ ಗುಣಗಳಿವೆ ಎಂಬುದು ನಿಮಗೆ ಗೊತ್ತೇ…?
ಚಪಾತಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಉತ್ತಮ ಪ್ರಮಾಣದ ಫೈಬರ್ ಇದ್ದು, ಸಿಲಿಕಾನ್ ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಸಾಕಷ್ಟಿದೆ. ಹಾಗಾಗಿ ಚಪಾತಿ ತಿಂದವರು ಸದಾ ಸ್ಟ್ರಾಂಗ್ ಆಗಿರುತ್ತಾರೆ.
ಚಪಾತಿಯಲ್ಲಿ ಅತ್ಯುತ್ತಮ ಪ್ರಮಾಣದ ಕಾರ್ಬೋ ಹೈಡ್ರೇಟ್ಸ್ ಗಳಿದ್ದು ಜಿಮ್ ಗೆ ಹೋಗುವವರು ನಿತ್ಯ ಇದನ್ನು ಸೇವಿಸುವುದು ಬಹಳ ಒಳ್ಳೆಯದು. ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವ ಚಪಾತಿ ಕೆಂಪು ರಕ್ತ ಕಣಗಳನ್ನು ವೃದ್ಧಿಗೊಳಿಸುತ್ತದೆ. ಬಿಳಿ ರಕ್ತಕಣಗಳ ಸಂಖ್ಯೆಯನ್ನೂ ಸಮತೋಲನದಲ್ಲಿ ಇಡುತ್ತದೆ.
ಚಪಾತಿ ತಯಾರಿಸುವಾಗ ತುಪ್ಪ ಬಳಸದೆ ಇದ್ದಲ್ಲಿ ಇದರಿಂದ ತೂಕವನ್ನೂ ಇಳಿಸಿಕೊಳ್ಳಬಹುದು. ಚಪಾತಿಯಲ್ಲಿ ಕಡಿಮೆ ಕ್ಯಾಲರಿ ಇದ್ದು, ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಹಲವು ರೀತಿಯ ಪೋಷಕಾಂಶಗಳನ್ನು ಹೊಂದಿರುವ ಇದರ ಸೇವನೆಯಿಂದ ಪದೇ ಪದೇ ಕಾಡುವ ಬ್ಯಾಕ್ಟೀರಿಯಾ ಸೋಂಕನ್ನು ತಡೆಗಟ್ಟಬಹುದು. ಇದು ನಿಮ್ಮ ದೇಹವನ್ನೂ ಬಲಿಷ್ಠಗೊಳಿಸುತ್ತದೆ.