ನಾವು ಮನೆಯಲ್ಲಿ ಮಾಡುವ ಚಪಾತಿಯೂ ಹೋಟೆಲ್ ಗಳಲ್ಲಿ ಸಿಗುವ ಪೂರಿಯಂತೆ ಉಬ್ಬಬೇಕು ಎಂದು ಪ್ರಯತ್ನಿಸಿ ಆಗದೆ ಕೈಚೆಲ್ಲಿ ಕುಳಿತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ. ಚಪಾತಿಯನ್ನೂ ಮೆತ್ತಗೆ, ಮೃದುವಾಗಿ ತಯಾರಿಸಲು ಹೀಗೆ ಮಾಡಿ.
ಮೊದಲನೆಯದಾಗಿ ಮಿಕ್ಸಿಂಗ್ ಬೌಲ್ ಗೆ ಒಂದೂವರೆ ಕಪ್ ನಷ್ಟು ಗೋಧಿ ಹಿಟ್ಟನ್ನು ಹಾಕಿ ಮತ್ತು ಸ್ವಲ್ಪ ಉಪ್ಪನ್ನು ಹಾಕಿ. ಇದಕ್ಕೆ ಒಂದು ಚಮಚದಷ್ಟು ಎಣ್ಣೆಯನ್ನು ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ನೀರನ್ನು ಹಾಕಿ ಹದವಾಗಿ ಹಿಟ್ಟು ಅನ್ನು ಕಲಸಿ. ತೀರ ಗಟ್ಟಿಯಾಗಿಯೂ, ತೀರಾ ಮೃದುವಾಗಿಯೂ ಇರುವುದು ಬೇಡ. ಹಿಟ್ಟು ಸರಿ ಪ್ರಮಾಣದಲ್ಲಿರಲಿ.
ಕಲಸಿದ ಹಿಟ್ಟನ್ನು ಸಂಪೂರ್ಣವಾಗಿ ಮುಚ್ಚವಂತೆ ಬಟ್ಟೆ ಹೊದಿಸಿ 15 ನಿಮಿಷ ಮುಚ್ಚಿಡಿ. ಇದನ್ನು ಉಂಡೆಗಳಾಗಿ ಮಾಡಿ ನೀವು ಸದಾ ಚಪಾತಿ ಮಾಡುವಂತೆ ಇದನ್ನು ಮಾಡಿ.
ಬೇಯಿಸುವಾಗ ಎರಡೂ ಬದಿಗೆ ಎಣ್ಣೆ ಪಸೆ ಹಚ್ಚಿ. ಆಗ ಚಪಾತಿ ಪೂರಿಯಂತೆ ಮೇಲೆದ್ದು ಉಬ್ಬುತ್ತದೆ.