alex Certify ಚಪಾತಿಗೆ ಸಾಥ್ ನೀಡುವ ‘ಆಲೂ-ಕ್ಯಾಪ್ಸಿಕಂ’ ಮಸಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಪಾತಿಗೆ ಸಾಥ್ ನೀಡುವ ‘ಆಲೂ-ಕ್ಯಾಪ್ಸಿಕಂ’ ಮಸಾಲ

Alu / Aloo Capsicum Masala « The Indian Food Court

ಚಪಾತಿಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಸುಲಭವಾಗಿ ಮಾಡುವ ಆಲೂ – ಕ್ಯಾಪ್ಸಿಕಂ ಮಸಾಲ ಇಲ್ಲಿದೆ. ಇದು ಬಿಸಿ ಅನ್ನದ ಜತೆ ಕೂಡ ಚೆನ್ನಾಗಿರುತ್ತದೆ.

ಮೊದಲಿಗೆ 1 ಕ್ಯಾಪ್ಸಿಕಂ ಹಾಗೂ 3 ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ¼ ಕಪ್ ತೆಂಗಿನಕಾಯಿ ತುರಿ, 1 ಹಸಿಮೆಣಸು, ಸಣ್ಣ ತುಂಡು ಚಕ್ಕೆ, 1 ಲವಂಗ, 1 ಏಲಕ್ಕಿ, ¼ ಟೀ ಸ್ಪೂನ್ ಸೋಂಪು, ಸ್ವಲ್ಪ ಕೊತ್ತಂಬರಿಸೊಪ್ಪು, 3 ಒಣಮೆಣಸು, 5 ಎಸಳು ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ ಹಾಕಿ ನೀರು ಸೇರಿಸಿ ರುಬ್ಬಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 1 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಸಾಸಿವೆ ಹಾಕಿ ನಂತರ ಒಂದು ಈರುಳ್ಳಿ ಕತ್ತರಿಸಿಕೊಂಡು ಹಾಕಿ ಕೆಂಪಾಗುವವರೆಗೆ ಫ್ರೈ ಮಾಡಿ. ಇದಕ್ಕೆ 1 ದೊಡ್ಡ ಗಾತ್ರದ ಟೊಮೆಟೊ ಕೂಡ ಕತ್ತರಿಸಿ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.

ನಂತರ ಚಿಟಿಕೆ ಅರಿಶಿನ, ಉಪ್ಪು, 1 ಚಮಚದಷ್ಟು ಸಾಂಬಾರು ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕತ್ತರಿಸಿಟ್ಟುಕೊಂಡ ಆಲೂಗಡ್ಡೆ ಹಾಗೂ ಕ್ಯಾಪ್ಸಿಕಂ ಅನ್ನು ಹಾಕಿ ಫ್ರೈ ಮಾಡಿ. ಇದಕ್ಕೆ ¼ ಕಪ್ ನೀರು ಸೇರಿಸಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ರುಬ್ಬಿದ ಮಿಶ್ರಣ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ. ತುಂಬಾ ತೆಳುವಾಗಿ ಈ ಮಿಶ್ರಣವನ್ನು ಮಾಡಬೇಡಿ.ನಂತರ ಕುಕ್ಕರ್ ಮುಚ್ಚಿ 1 ವಿಷಲ್ ಕೂಗಿಸಿಕೊಳ್ಳಿ. ರುಚಿಕರವಾದ ಆಲೂ-ಕ್ಯಾಪ್ಸಿಕಂ ಮಸಾಲ ರೆಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...