ಕಾರ್ನ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಚಾಟ್ ಮಸಾಲ, ಖಾರದ ಪುಡಿ ಸೇರಿಸಿ ಮಾಡಿದ ಕಾರ್ನ್ ಚಾಟ್ ತಿನ್ನುತ್ತಿದ್ದರೆ ಇದು ಹೊಟ್ಟೆಗೆ ಸೇರಿದ್ದೆ ಗೊತ್ತಾಗುವುದಿಲ್ಲ. ಮಾಡುವ ವಿಧಾನ ಸುಲಭವಿದೆ. ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
2 ಕಪ್-ಸ್ವೀಟ್ ಕಾರ್ನ್, 1 ಟೀ ಸ್ಪೂನ್- ಬೆಣ್ಣೆ, ¼ ಟೀ ಸ್ಪೂನ್-ಖಾರದ ಪುಡಿ, ¼ ಟೀ ಸ್ಪೂನ್-ಜೀರಿಗೆ ಪುಡಿ, 2 ಟೇಬಲ್ ಸ್ಪೂನ್- ಲಿಂಬೆ ಹಣ್ಣಿನ ರಸ, ¾ ಟೀ ಸ್ಪೂನ್- ಚಾಟ್ ಮಸಾಲ.1/4 ಟೀ ಸ್ಪೂನ್- ಉಪ್ಪು.
ಮಾಡುವ ವಿಧಾನ:
ಮೊದಲಿಗೆ 2 ಕಪ್ ಕಾರ್ನ್ ಅನ್ನು 5 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ.ನಂತರ ನೀರನ್ನು ಬಸಿದುಕೊಂಡು ಕಾರ್ನ್ ಅನ್ನು ಒಂದು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಬೆಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ. ಇದು ಪರಿಮಳ ಬರುತ್ತಿದ್ದಂತೆ ಒಂದು ಬೌಲ್ ಗೆ ಹಾಕಿಕೊಂಡು ತಣ್ಣಗಾಗುವುದಕ್ಕೆ ಬಿಡಿ. ನಂತರ ಇದಕ್ಕೆ ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲ, ಉಪ್ಪು, ಲಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸರ್ವ್ ಮಾಡಿ.