ಚಳಿಗಾಲದಲ್ಲಿ ಬಿಸಿಬಿಸಿ ರುಚಿರುಚಿ ತಿಂಡಿ ಯಾರಿಗೆ ಇಷ್ಟವಾಗಲ್ಲ ಹೇಳಿ…? ಹೊರಗಿನ ತಿಂಡಿ ಆರೋಗ್ಯ ಹಾಳು ಮಾಡುತ್ತೆ ಎನ್ನುವವರು ಮನೆಯಲ್ಲಿಯೇ ಚಟಾಪಟ್ ಆಲೂ ಚಾಟ್ ಮಾಡಿ ಸವಿಯಿರಿ.
ಚಟಪಟ್ ಆಲೂ ಚಾಟ್ ಮಾಡಲು ಬೇಕಾಗುವ ಸಾಮಗ್ರಿ :
230 ಗ್ರಾಂ ಸಕ್ಕರೆ, 320 ಮಿಲಿ ಲೀಟರ್ ನೀರು, 2 ಚಮಚ ಮಾವಿನ ಪುಡಿ, 1 ಚಮಚ ಕೆಂಪು ಮೆಣಸಿನ ಪುಡಿ, 1 ಚಮಚ ಜೀರಿಗೆ ಪುಡಿ, 1 ಚಮಚ ಕಪ್ಪು ಉಪ್ಪು, 1 ಚಮಚ ಶುಂಠಿ ಪುಡಿ, 1 ಚಮಚ ಸೋಂಪಿನ ಪುಡಿ, 400 ಗ್ರಾಂ ಆಲೂಗಡ್ಡೆ, ಅಲಂಕಾರಕ್ಕೆ ಚಾಟ್ ಮಸಾಲೆ.
ಚಟಪಟ್ ಆಲೂ ಚಾಟ್ ಮಾಡುವ ವಿಧಾನ :
ಮೊದಲು ಒಂದು ಪಾತ್ರೆಗೆ ಸಕ್ಕರೆ ಹಾಗೂ ನೀರನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ನಂತ್ರ ಅದಕ್ಕೆ ಮಾವಿನ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಕಪ್ಪು ಉಪ್ಪು, ಶುಂಠಿ ಪುಡಿ, ಸೋಂಪಿನ ಪುಡಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ.
ಇದನ್ನು ಸುಮಾರು 4-5 ನಿಮಿಷ ಬೇಯಿಸಿ. ಮಿಶ್ರಣ ದಪ್ಪಗಾಗ್ತಿದ್ದಂತೆ ಒಲೆಯಿಂದ ಕೆಳಗಿಳಿಸಿ.
ಇನ್ನೊಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿದ ಆಲೂಗಡ್ಡೆಯನ್ನು ಹಾಕಿ ಫ್ರೈ ಮಾಡಿ. ನಂತ್ರ ಟವೆಲ್ ಮೇಲಿಟ್ಟು ಲಗುವಾಗಿ ಆಲೂಗಡ್ಡೆಯನ್ನು ಒತ್ತಿ. ಎಣ್ಣೆ ಹೀರಿದ ನಂತ್ರ ಫ್ರೈ ಆದ ಆಲೂಗಡ್ಡೆಯನ್ನು ಈ ಮಿಶ್ರಣಕ್ಕೆ ಸೇರಿಸಿ ಮೇಲೆ ಚಾಟ್ ಮಸಾಲೆ ಉದುರಿಸಿ. ಆಲೂಗಡ್ಡೆ ಚಾಟ್ ತಿನ್ನಲು ರೆಡಿ.