ಚಂಡಮಾರುತದ ನಡುವೆಯೇ ಡ್ರೈವ್ ಮಾಡಿಕೊಂಡು ಸುರಕ್ಷಿತ ತಾಣ ತಲುಪಿದ ಚಾಲಕ 04-04-2023 3:03PM IST / No Comments / Posted In: Automobile News, Car News, Latest News, Live News, International ಅಮೆರಿಕದ ಅರ್ಕಾನ್ಸಾಸ್ ಅನ್ನು ಅಕ್ಷರಶಃ ನಡುಗಿಸಿದ ಚಂಡಮಾರುತದಿಂದ ಆಗಿರುವ ಹಾನಿಯಿಂದ ಚೇತರಿಸಿಕೊಳ್ಳಲು ವರ್ಷಗಳೇ ಬೇಕು. ಇಲ್ಲಿನ ಲಿಟಲ್ ರಾಕ್ ಪ್ರದೇಶದಲ್ಲಿ ಚಂಡಮಾರುತದ ವೃತ್ತವೊಂದರ ಮೂಲಕವೇ ಡ್ರೈವಿಂಗ್ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ಶೇರ್ ಮಾಡಿರುವ ಈ ವಿಡಿಯೋದಲ್ಲಿ, ಕೋಡಿ ಕೂಂಬರ್ಸ್ ಎಂಬ ವ್ಯಕ್ತಿ ತನ್ನ ವ್ಯಾನ್ ಏರುತ್ತಲೇ ಜೋರಾದ ಗಾಳಿ ಆರಂಭಗೊಳ್ಳುತ್ತದೆ. ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಚಂಡಮಾರುತ ಹಂತಹಂತವಾಗಿ ಜೋರಾಗುತ್ತಾ ಸಾಗಿರುವಂತೆಯೇ ಕೋಡಿ ಡ್ರೈವ್ ಮಾಡುತ್ತಾ ಸಾಗುವುದನ್ನು ನೋಡಬಹುದಾಗಿದೆ. ಸುತ್ತಲೂ ಮರಗಳು ಉರುಳುತ್ತಾ, ಅವಶೇಷಗಳೆಲ್ಲಾ ಛಿದ್ರಗೊಂಡು ತೂರಾಡುತ್ತಿರುವ ನಡುವೆಯೇ ಕೋಡಿ ತನ್ನ ಡ್ರೈವಿಂಗ್ ಅನ್ನು ಶಾಂತವಾಗಿ ಮುನ್ನಡೆಸಿಕೊಂಡು ಸಾಗಿದ್ದಾರೆ. “ನಾನು 100% ಜೀವ ಕಳೆದುಕೊಳ್ಳಲಿದ್ದೇನೆ ಎಂದೇ ಭಾವಿಸಿದ್ದೆ. ನನ್ನೆದೆರುವಿನ ಮೋಡಗಳು ಒಂದಷ್ಟು ಅವಶೇಷಗಳನ್ನು ಎತ್ತಿಕೊಳ್ಳುತ್ತಿದ್ದವು, ಇದನ್ನು ಕಂಡು ನಾನು ಮೊದಲು ನನ್ನ ಫೋನ್ ಕೈಗೆತ್ತಿಕೊಂಡೆ. ನನ್ನೆದುರೇ ಮರದ ಛಾವಣಿಯ ಚುರೊಂದು ಹಾರಿ ಹೋಗುತ್ತಿದ್ದುದ್ದನ್ನು ಕಂಡೆ. ಈ ಸಂದರ್ಭದಲ್ಲಿ ನಾನು ಅಲ್ಲೇ ಹತ್ತಿರದಲ್ಲೇ ಇರುವೆ ಎಂದು ನನಗೆ ಅನಿಸಿತು,” ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ ಕೋಡಿ. ತನ್ನ ವ್ಯಾನ್‌ನಲ್ಲಿ ಇಟ್ಟಿದ್ದ ವಸ್ತುಗಳ ತೂಕದ ಕಾರಣದಿಂದ ತನ್ನ ವಾಹನ ಹಾರುವ ಸಾಧ್ಯತೆ ತಗ್ಗಿತೆಂದು ತಿಳಿಸುವ ಕೋಡಿ, ಒಂದು ವೇಳೆ ತಾನೇನಾದರೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದೇ ಆಗಿದ್ದಲ್ಲಿ ಚಂಡಮಾರುತದ ಬಿರುಗಾಳಿ ತನ್ನ ವಾಹನವನ್ನು ಸೀಳಿಕೊಂಡು ಸಾಗಿರುತ್ತಿತ್ತು ಎಂದಿದ್ದಾರೆ. An Arkansas resident recalls the 'scariest moment' of his life after riding out a tornado in his van pic.twitter.com/sAEGza5Sqr — Reuters (@Reuters) April 2, 2023