ಮನೆಯ ಒಳಗೆ ಕಾಲಿಟ್ಟಾಗ ಘಂ ಎನ್ನುವ ಪರಿಮಳವಿದ್ದರೆ ಎಷ್ಟೇ ಒತ್ತಡ, ತಲೆಬಿಸಿ ಇದ್ದರೂ ಮನಸ್ಸಿಗೆ ನಿರಾಳವಾಗುತ್ತದೆ. ಅದೇ ಒಂದು ರೀತಿಯ ವಾಸನೆ ಬರುತ್ತಿದ್ದರೆ ಮತ್ತಷ್ಟೂ ಮನಸ್ಸು ಕಿರಿಕಿರಿಯಾಗುತ್ತದೆ. ಸರಿಯಾಗಿ ಕ್ಲೀನ್ ಮಾಡದೇ ಇದ್ದಾಗ ಕೆಲವೊಮ್ಮೆ ಈ ರೀತಿಯ ವಾಸನೆ ಬರುತ್ತದೆ.
ಈ ವಾಸನೆಯನ್ನು ನಿವಾರಿಸಲು ಕೆಲವರು ಏರ್ ಫ್ರೆಶನರ್ ಉಪಯೋಗಿಸುತ್ತಾರೆ. ಆದರೆ ಇದಕ್ಕೆ ರಾಸಾಯನಿಕಗಳನ್ನು ಉಪಯೋಗಿಸುವುದರಿಂದ ಇದರ ವಾಸನೆ ತೆಗೆದುಕೊಂಡಾಗ ಕೆಲವರಿಗೆ ವಾಂತಿ ಬರುವುದು, ಹೊಟ್ಟೆ ತೊಳೆಸಿದಂತೆ ಆಗುತ್ತದೆ. ಹಾಗಾಗಿ ಮನೆಯಲ್ಲಿ ಪರಿಮಳಭರಿತವಾದ ಏರ್ ಫ್ರೆಶನರ್ ಮಾಡುವ ವಿಧಾನ ಇಲ್ಲಿದೆ. ನಿಮ್ಮ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.
10 ಹನಿಗಳಾಗುವಷ್ಟು ಯಾವುದಾದರೂ ಎಸೆನ್ಸಿಯಲ್ ಆಯಿಲ್. ನಿಮಗೆ ಯಾವುದು ಇಷ್ಟನೋ ಅದನ್ನು ತೆಗೆದುಕೊಳ್ಳಿ. 1 ಸ್ಪ್ರೇ ಬಾಟಲ್, 1 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ, 500 ಎಂ.ಎಲ್ ಡಿಸ್ಟಿಲ್ಡ್ ವಾಟರ್.
ಒಂದು ಬೌಲ್ ಗೆ ಎಸೆನ್ಸಿಯಲ್ ಆಯಿಲ್, ಬೇಕಿಂಗ್ ಸೋಡಾ ಹಾಕಿ ಒಂದು ಪೋರ್ಕ್ ನ ಸಹಾಯದಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಅದಕ್ಕೆ ಡಿಸ್ಟಿಲ್ಡ್ ವಾಟರ್ ಸೇರಿಸಿ ಮುಚ್ಚಳ ಮುಚ್ಚಿ. ಉಪಯೋಗಿಸುವ ಮೊದಲು ಸ್ಪ್ರೇ ಬಾಟಲ್ ಅನ್ನು ಚೆನ್ನಾಗಿ ಅಲ್ಲಾಡಿಸಿ ಉಪಯೋಗಿಸಿ. ನಿಮ್ಮ ಮನೆ, ಆಫೀಸ್, ಕರ್ಟನ್, ಫರ್ನಿಚರ್ ಎಲ್ಲಾ ಕಡೆ ಇದನ್ನು ಸ್ಪ್ರೇ ಮಾಡಬಹುದು.