ನಿರ್ಜಲೀಕರಣ ಮತ್ತು ಶುಷ್ಕ ಚರ್ಮಕ್ಕೆ ಚಿಕಿತ್ಸೆ ನೀಡಲು ಗ್ಲಿಸರಿನ್ ಅತ್ಯಂತ ಪರಿಣಾಮಕಾರಿ ವಸ್ತುವಾಗಿದೆ.
ಇದನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸುತ್ತಾರೆ. ಈ ಗ್ಲಿಸರಿನ್ ಬಳಸಿ ಮನೆಯಲ್ಲಿಯೇ ಸೌಂದರ್ಯ ಉತ್ಪನ್ನಗಳನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯೋಣ.
ಚಳಿಗಾಲದಲ್ಲಿ ನಿಮ್ಮ ಕೈಕಾಲುಗಳು ತುಂಬಾ ಡ್ರೈ ಆಗುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು 2 ಚಮಚ ಜೇನುತುಪ್ಪ, 2 ಚಮಚ ಗ್ಲಿಸರಿನ್, 2 ಚಮಚ ಓಟ್ ಮೀಲ್ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ನಿಮ್ಮ ಕೈಕಾಲುಗಳಿಗೆ ಹಚ್ಚಿ ಒಣಗಲು ಬಿಡಿ. ನಂತರ ಹಾಲಿನಿಂದ ಸ್ಕ್ರಬ್ ಮಾಡಿ ನೀರಿನಿಂದ ವಾಶ್ ಮಾಡಿ.
ಮುಖದ ಸ್ಕಿನ್ ಡ್ರೈಯಾಗಿದ್ದರೆ 2 ಚಮಚ ಸಕ್ಕರೆ, 2 ಚಮಚ ಗ್ಲಿಸರಿನ್, 2 ಹನಿ ಲ್ಯಾವೆಂಡರ್ ಆಯಿಲ್, 1 ಚಮಚ ಉಪ್ಪು, ½ ನಿಂಬೆ ರಸ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಚರ್ಮದ ಮೇಲೆ ಸ್ಕ್ರಬ್ ಮಾಡಿ ಸಕ್ಕರೆ. ಉಪ್ಪು ಕರಗುವವರೆಗೂ ಸ್ಕ್ರಬ್ ಮಾಡುತ್ತೀರಿ. ನಂತರ ನೀರಿನಿಂದ ವಾಶ್ ಮಾಡಿ.