![](https://kannadadunia.com/wp-content/uploads/2020/01/88e93021-a1d7-4722-8b76-80e082df7914.jpg)
ಹೆಚ್ಚಿದ ದೇಹ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಏನೇನೋ ಸರ್ಕಸ್ ಮಾಡಿದ್ರೂ ದೇಹದ ತೂಕ ಇಳಿಕೆಯಾಗದಿದ್ದಾಗ ಮನಸ್ಸಿಗೆ ಬೇಸರವಾಗುತ್ತದೆ.
ಅಂತಹವರು ಸರಿಯಾದ ಕ್ರಮದಲ್ಲಿ ಗ್ರೀನ್ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ದೇಹದ ತೂಕ ಇಳಿಸಿಕೊಳ್ಳಬಹುದು.
ಗ್ರೀನ್ ಟೀ ತೂಕ ಇಳಿಕೆಗೆ ಹೆಚ್ಚು ಸಹಕಾರಿ. ಇದು ಕುಡಿಯಲು ಅಷ್ಟು ರುಚಿಕರವಾಗಿಲ್ಲದಿದ್ದರೂ ತೂಕ ಇಳಿಸಿಕೊಳ್ಳುವವರಿಗೆ ಇದೊಂದು ವರದಾನ ಎಂದರೆ ತಪ್ಪಾಗಲಾರದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಹೇರಳವಾಗಿದೆ. ಹಾಗೇ ವಿಟಮಿನ್ ಬಿ, ಪೋಟ್ಯಾಷಿಯಂ, ಮಗ್ನೇಷಿಯಂ, ಕೆಫಿನ್ ಕೂಡ ಇದೆ.
ಗ್ರೀನ್ ಟೀಯನ್ನು ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಗೆ ಕುಡಿಯಬೇಡಿ. ಇದರಲ್ಲಿ ಕೆಫಿನ್ ಅಂಶ ಇರುವುದರಿಂದ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಡಿಹೈಡ್ರೇಷನ್ ಗೆ ಉಂಟಾಗುತ್ತದೆ. ಹಾಗೇ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಅಲ್ಸರ್ ಗೆ ಕೂಡ ಕಾರಣವಾಗುತ್ತದೆ. ಬೆಳಿಗ್ಗಿನ ಉಪಹಾರವಾಗಿ ಒಂದು ಗಂಟೆಯ ನಂತರ ಕುಡಿಯಿರಿ.
ಇನ್ನು ಕೆಲವರು ರಾತ್ರಿ ಊಟವಾದ ತಕ್ಷಣ ಗ್ರೀನ್ ಟೀ ಕುಡಿಯುತ್ತಾರೆ. ಊಟವಾಗಿ 1 ಗಂಟೆ ನಂತರ ಗ್ರೀನ್ ಟೀ ಕುಡಿಯಿರಿ. ಗ್ರೀನ್ ಟೀ ಕುಡಿದ ತಕ್ಷಣ ಮಲಗಬೇಡಿ. ಗ್ರೀನ್ ಟೀ ಕುಡಿದು 2 ಗಂಟೆ ನಂತರ ಮಲಗಿ. ಊಟದ ನಂತರ ಗ್ರೀನ್ ಟೀ ಕುಡಿಯುವುದರಿಂದ ದೇಹದಲ್ಲಿರುವ ಕೊಬ್ಬನ್ನು ಕರಗಿಸುವುದಕ್ಕೆ ಸಹಾಯ ಮಾಡುತ್ತದೆ. ಹಾಗೇ ರಾತ್ರಿ ಊಟ ಮಾಡದೇ ಯಾವುದೇ ಕಾರಣಕ್ಕೂ ಗ್ರೀನ್ ಟೀ ಕುಡಿಯಬೇಡಿ. ಇದರಲ್ಲಿರುವ ಕೆಫಿನ್ ಅಂಶ ನಿದ್ರೆಗೆ ತೊಂದರೆ ಮಾಡುತ್ತದೆ.
ಇದನ್ನು ಸರಿಯಾದ ಕ್ರಮದಲ್ಲಿ ಸೇವಿಸುವುದರಿಂದ ಕೊಬ್ಬಿನಾಂಶವು ಕರಗಿ ದೇಹದ ತೂಕ ಇಳಿಕೆಗೆ ಸಹಾಯವಾಗಲಿದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಕುಡಿಯಬೇಡಿ.