ಗ್ರೀನ್ ಟೀ ಕುಡಿಯುವುದರಿಂದ ದೇಹಕ್ಕೆ ಹಲವು ಉಪಯೋಗಗಳಿವೆ ಎಂಬುದು ನಿಮಗೆ ತಿಳಿದಿರಬಹುದು. ಆದರೆ ಇದರಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ….?
ಗ್ರೀನ್ ಟೀ ಮಾಸ್ಕ್ ನಿಂದ ಮುಖದ ಮೇಲಿನ ಮೊಡವೆ, ಕಲೆಗಳು ನಿವಾರಣೆಯಾಗುತ್ತವೆ. ಇದನ್ನು ಮಾಡುವ ವಿಧಾನ ತಿಳಿಯೋಣ ಬನ್ನಿ.
ಗ್ರೀನ್ ಟೀ ಗೆ ಮೊಸರು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖದ ಮೇಲೆ ಹಚ್ಚಿ 20 ನಿಮಿಷದ ಬಳಿಕ ಸ್ವಚ್ಛವಾದ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಸುಕ್ಕು ನೆರಿಗೆಗಳು ಮಾಯವಾಗುತ್ತವೆ. ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಕೆಳಗಿರುವ ಕಪ್ಪು ವರ್ತುಲವನ್ನು ಹೋಗಲಾಡಿಸುತ್ತದೆ. ಹಾಗೂ ಮುಖಕ್ಕೆ ವಿಶೇಷ ಹೊಳಪು ಲಭಿಸುತ್ತದೆ.
ಇನ್ನೊಂದು ವಿಧಾನವೆಂದರೆ ಒಂದು ಲೋಟ ಬಿಸಿ ನೀರಿಗೆ ಗ್ರೀನ್ ಟೀ ಬೆರೆಸಿ. ನೀರಿನ ಬಣ್ಣ ಬದಲಾಗುತ್ತಲೇ ಶೋಧಿಸಿ. ಈ ನೀರಲ್ಲಿ ಟಿಶ್ಯು ಪೇಪರ್ ಅದ್ದಿ ಈ ಪೇಪರ್ ಅನ್ನು ಮುಖಕ್ಕೆ ಹಾಕಿ ಹತ್ತು ನಿಮಿಷ ಬಿಡಿ. ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಮಾಡುವುದರಿಂದ ಮುಖದ ಕಲೆಗಳು ದೂರವಾಗುತ್ತವೆ.
ಗ್ರೀನ್ ಟೀಗೆ ಮುಖದ ಮೇಲಿರುವ ಸತ್ತ ಜೀವಕೋಶಗಳನ್ನೂ ತೊಡೆದು ಹಾಕುವ ಗುಣವಿದೆ. ಹಾಗಾಗಿ ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಬಳಸಿ, ಹೊಳೆಯುವ ಆಕರ್ಷಕ ಮುಖವನ್ನು ನಿಮ್ಮದಾಗಿಸಿಕೊಳ್ಳಿ.