ವೈರಲ್ ಇನ್ಫೆಕ್ಷನ್ ಗೆ ಪ್ರಮುಖ ಕಾರಣ ಹವಾಮಾನ ಬದಲಾವಣೆ. ಮಳೆಗಾಲ ಶುರುವಾಯ್ತು ಅಂದಾಕ್ಷಣ ಹವಾಮಾನ ಬದಲಾಗೋದು ಸಹಜ. ಈ ಸಮಯದಲ್ಲೇ ವೈರಸ್ ಗಳ ಕಾಟ ಶುರುವಾಗುತ್ತೆ. ಇನ್ಫೆಕ್ಷನ್ ಇದ್ದಾಗ ನೆಗಡಿ ಹಾಗೂ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ ಸ್ವಲ್ಪ ಕಡಿಮೆಯಾದ ಕೂಡಲೇ ಕೆಮ್ಮು ಕಾಡಲಾರಂಭಿಸುತ್ತದೆ.
ಹಾಗಾಗಿ ನಿಮ್ಮ ದಿನನಿತ್ಯದ ಡಯಟ್ ನಲ್ಲಿ ಗ್ರೀನ್ ಟೀಯನ್ನೂ ಸೇರಿಸಿಕೊಳ್ಳಿ. ತಪ್ಪದೇ ಪ್ರತಿನಿತ್ಯ ಗ್ರೀನ್ ಟೀ ಕುಡಿಯಿರಿ. ಯಾಕಂದ್ರೆ ಗ್ರೀನ್ ಟೀ, ನೆಗಡಿ ಹಾಗೂ ಕೆಮ್ಮಿಗೆ ಉತ್ತಮ ಮದ್ದು. ಇದರಲ್ಲಿ ಆ್ಯಂಟಿ ಒಕ್ಸಿಡೆಂಟ್ಸ್ ಇರೋದ್ರಿಂದ ಜ್ವರ, ನೆಗಡಿ, ಕೆಮ್ಮಿಗೆ ಕಾರಣವಾಗುವ ಇನ್ಫೆಕ್ಷನ್ ವಿರುದ್ಧ ಇದು ಹೋರಾಡುತ್ತದೆ.
ಕೀಟಾಣುಗಳ ವಿರುದ್ಧ ಹೋರಾಡುವ ಶಕ್ತಿ ಕೂಡ ಗ್ರೀನ್ ಟೀಯಲ್ಲಿದೆ. ಗಂಟಲು ಕೆರೆತ, ನೋವು ಇದ್ದರೆ ಬಿಸಿ ಬಿಸಿ ಗ್ರೀನ್ ಟೀ ಕುಡಿಯುವುದರಿಂದ ಆರಾಮ ಸಿಗುತ್ತದೆ. ವೈರಸ್ ವಿರುದ್ಧ ಹೋರಾಡಲು ನಿಮ್ಮ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಬೇಕು. ಈ ಕೆಲಸವನ್ನು ಗ್ರೀನ್ ಟೀ ಮಾಡುತ್ತದೆ. ಗ್ರೀನ್ ಟೀಗೆ ಸ್ವಲ್ಪ ಜೇನುತುಪ್ಪ ಹಾಕಿ ಕುಡಿದ್ರೆ ಕಫದ ಸಮಸ್ಯೆಯೂ ನಿವಾರಣೆಯಾಗುತ್ತದೆ.