alex Certify ‘ಗ್ರೀನ್‌ ಟೀ’ ಯಾರ್ಯಾರು ಸೇವಿಸಬಾರದು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗ್ರೀನ್‌ ಟೀ’ ಯಾರ್ಯಾರು ಸೇವಿಸಬಾರದು ಗೊತ್ತಾ…..?

Is Green Tea Good for Oral Health? | Dr. Robert M. Sorin, DMD

ಗ್ರೀನ್‌ ಟೀ ನಮ್ಮ ದೇಹದ ಡಿಟಾಕ್ಸ್‌ಗೆ ತುಂಬಾ ಒಳ್ಳೆಯದು. ಆರೋಗ್ಯಕ್ಕೆ ಒಳ್ಳೆಯದೆಂದು ದಿನಕ್ಕೆ ಎರಡು ಲೋಟಕ್ಕಿಂತ ಹೆಚ್ಚು ಕುಡಿಯಬಾರದು.
ಅದರಲ್ಲೂ ಈ ರೀತಿಯ ಲಕ್ಷಣಗಳು ಕಂಡು ಬಂದಾಗ ಹಾಗೂ ಈ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಗ್ರೀನ್‌ ಟೀ ಕುಡಿಯಬಾರದು.

* ರಕ್ತಹೀನತೆ ಇರುವವರು ಗ್ರೀನ್‌ ಟೀ ಕುಡಿಯಬಾರದು.

ಕಬ್ಬಿಣದಂಶವಿರುವ ಆಹಾರವನ್ನು ಸೇವಿಸಿದ ಬಳಿಕ ಗ್ರೀನ್‌ ಟೀ ಕುಡಿದರೆ ದೇಹವು ಕಬ್ಬಿಣದಂಶವನ್ನು ಹೀರಿಕೊಳ್ಳಲು ತಡೆಯೊಡ್ಡುತ್ತದೆ.

* ಗ್ರೀನ್‌ ಟೀಯಲ್ಲಿರುವ EGCG ಅಂಶ ಕಿಣ್ವಗಳನ್ನು ನಿಯಂತ್ರಿಸುವುದರಿಂದ ಕೆಲವರಿಗೆ ಎದೆ ಉರಿ ಕೂಡ ಕಾಣಿಸಬಹುದು.

* ಗ್ರೀನ್‌ ಟೀಯನ್ನು ಮಿತಿ ಮೀರಿ ಕುಡಿದರೆ ಹೃದಯದ ಬಡಿತದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಕೆಲವೊಮ್ಮೆ ವಾಂತಿ, ಬೇಧಿ ಉಂಟಾಗುವುದು.

* ಸ್ನಾಯು ಸೆಳೆತ ಉಂಟಾಗುತ್ತಿದ್ದರೆ ಗ್ರೀನ್‌ ಟೀ ಕುಡಿಯುವುದನ್ನು ಕಮ್ಮಿ ಮಾಡುವುದು ಒಳ್ಳೆಯದು.

* ಕರುಳಿನ ಕ್ಯಾನ್ಸರ್‌ ಇರುವವರು, ಸಂತಾನ ನಿಯಂತ್ರಣ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಮಧುಮೇಹ ನಿಯಂತ್ರಣಕ್ಕೆ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಗ್ರೀನ್‌ ಟೀ ಕುಡಿಯದಿದ್ದರೆ ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...