ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿರುವ ನಡುವೆ ಹೋಟೆಲ್ ತಿಂಡಿ, ಊಟದ ದರದಲ್ಲಿಯೂ ಏರಿಕೆ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.
ಹಾಲಿನ ದರ ಲೀಟರ್ ಗೆ 3 ರೂಪಾಯಿ ಹೆಚ್ಚಳವಾಗಿದೆ. ಟೊಮೆಟೊ ದರ ದಿನದಿಂದ ದಿನಕ್ಕೆ ರಾಕೇಟ್ ವೇಗದಲ್ಲಿ ಹೆಚ್ಚುತ್ತಿದೆ. ದಿನಬಳಕೆ ವಸ್ತುಗಳ ಬೆಲೆಯೆಲ್ಲವೂ ಏರಿಕೆಯಾಗಿರುವುದರಿಂದ ಹೋಟೆಲ್ ಫುಡ್ ಗಳ ದರ ಏರಿಸುವುದು ಅನಿವಾರ್ಯವಾಗಿದೆ.
ಹೋಟೆಲ್ ತಿಂಡಿಗಳ ದರವನ್ನು ಶೇ.10ರಷ್ಟು ಏರಿಕೆ ಮಾಡಲು ಹೋಟೆಲ್ ಮಾಲೀಕರ ಅಸೋಸಿಯೇಷನ್ ನಿರ್ಧರಿಸಿದೆ. ಕಾಫಿ-ಟೀ 3 ರೂಪಾಯಿ ಹಾಗೂ ತಿಂಡಿ-ತಿನಿಸುಗಳ ದರ 5 ರೂಪಾಯಿ ಹಾಗೂ ಊಟದ ದರ 10ರೂಪಾಯಿ ಹೆಚ್ಚಳ ಮಾಡಲು ಸಜ್ಜಾಗಿದೆ.