
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳಿಗೆ ಇಂದು ಸಂತಸದ ದಿನ. ಏಕೆಂದರೆ ಇಂದು ಅವರ ಮುಂದೆ ಮದಗಜ ಅಪ್ಪಳಿಸಿದೆ. ಅದ್ದೂರಿ ಬಜೆಟ್ ನಲ್ಲಿ ಮೂಡಿ ಬಂದಿರುವ ಮದಗಜ ಸಿನಿಮಾ ಇಂದು ತೆರೆಗೆ ಬಂದಿದೆ. ನಟಿ ಆಶಿಕಾ ರಂಗನಾಥ್ ಹಾಗೂ ಶ್ರೀಮುರಳಿ ಜೋಡಿಯಲ್ಲಿ ಮೂಡಿ ಬಂದಿರುವ ಚಿತ್ರದ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ನಿರ್ದೇಶಕ ಮಹೇಶ್ ಕುಮಾರ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಕಾಂಬಿನೇಷನ್ ನಲ್ಲಿ ಮದಗಜ ಮೂಡಿ ಬಂದಿದೆ. ಮೊದಲ ದಿನ ಈ ಸಿನಿಮಾಗೆ ಗ್ರ್ಯಾಂಡ್ ಓಪನಿಂಗ್ ಸಿಗುತ್ತಿದೆ. ಅಭಿಮಾನಿಗಳು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಉಗ್ರಂ ಸಿನಿಮಾ ಗೆದ್ದ ನಂತರ ಶ್ರೀಮುರಳಿ ಸಾಹಸ ಸಿನಿಮಾದತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೇ, ಇಂತಹ ಚಿತ್ರದಲ್ಲಿ ಕೂಡ ಯಶಸ್ಸು ಕಾಣುತ್ತಿದ್ದಾರೆ. ಮದಗಜ ಚಿತ್ರದಲ್ಲಿಯೂ ಭರ್ಜರಿ ಸಾಹಸ ದೃಶ್ಯಗಳಿವೆ ಎಂಬುವುದಕ್ಕೆ ಟ್ರೇಲರ್ ಪುಷ್ಟಿ ನೀಡುತ್ತಿದೆ. ಈ ಚಿತ್ರದಲ್ಲಿ ಸಾಹಸದ ಮೂಲಕ ತಾಯಿ ಸೆಂಟಿಮೆಂಟ್ ಕೂಡ ಇದೆ.
ಇನ್ನೂ ಮುಗಿದಿಲ್ಲ ಕೊರೊನಾ ಆತಂಕ..! ಈ 15 ಜಿಲ್ಲೆಗಳಲ್ಲಿ ಈಗಲೂ ಇದೆ ಅತ್ಯಧಿಕ ಕೋವಿಡ್ ಪ್ರಕರಣ
ಉಮಾಪತಿ ಶ್ರೀನಿವಾಸ್ ಗೌಡ, ರಾಬರ್ಟ್ ಸಿನಿಮಾ ನಿರ್ಮಿಸಿ ಭರ್ಜರಿ ಯಶಸ್ಸು ಕಂಡ ನಂತರ ಈಗ ಮದಗಜ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ತಾಂತ್ರಿಕ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.
ನಿರ್ದೇಶಕ ಮಹೇಶ್ ಕುಮಾರ್ ಅವರು ʼಅಯೋಗ್ಯʼ ಸಿನಿಮಾ ಮಾಡಿದ್ದರು. ಕಾಮಿಡಿ ಪ್ರಕಾರದಲ್ಲಿ ಆ ಚಿತ್ರವನ್ನು ತೆರೆಗೆ ತಂದಿದ್ದ ಅವರು ಇಂದು ಮದಗಜ ಸಿನಿಮಾವನ್ನು ಪಕ್ಕಾ ಆ್ಯಕ್ಷನ್ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿ ಆಶಿಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.