ಅಡುಗೆ ಮಾಡುವಾಗ, ತಯಾರಿಸುವಾಗ ಕುದಿದ ಆಹಾರ ಪದಾರ್ಥಗಳು ಉಕ್ಕಿ ಚೆಲ್ಲಿ ಗ್ಯಾಸ್ ಸ್ಟೌವ್ ಹಾಳಾಗಿದೆಯೇ. ಅದನ್ನು ಹೀಗೆ ಸರಿಮಾಡಬಹುದು.
ಮೆಡಿಕಲ್ ಗಳಲ್ಲಿ ಸಿಗುವ ಅಮ್ಮೋನಿಯ ಪೌಡರ್ ಅನ್ನು ನೀರಿನಲ್ಲಿ ಹಾಕಿ ಅದರಲ್ಲಿ ಗ್ಯಾಸ್ ಸ್ಟೌವ್ ನ ಬರ್ನರ್ ಗಳನ್ನು ನೆನೆಹಾಕಿ. ಮರುದಿನ ಬೆಳಗ್ಗೆ ಎದ್ದು ತಿಕ್ಕಿ ತೊಳೆದರೆ ನಿಮ್ಮ ಬರ್ನರ್ ಮತ್ತೆ ಮೊದಲಿನ ಬಣ್ಣ ಪಡೆಯುತ್ತದೆ.
ಬೇಕಿಂಗ್ ಸೋಡಾಗೆ ಹೈಡ್ರೋಜನ್ ಪರಾಕ್ಸೈಡ್ ಬೆರೆಸಿ ಗ್ಯಾಸ್ ಸ್ಟೌವ್ ನಲ್ಲಿ ಕಲೆಗಳಿರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ಉಜ್ಜಿ ತೊಳೆದರೆ ಕಲೆಗಳು ಮಾಯವಾಗುತ್ತವೆ. ಬಿಸಿಯಾದ ನೀರನ್ನು ಸ್ಪಾಂಜ್ ಗೆ ಹಾಕಿ ಅದನ್ನು ಗ್ಯಾಸ್ ಸ್ಟೌವ್ ಗೆ ಹಾಕಿ ತಿಕ್ಕಿ ತೊಳೆದರೂ ಕಲೆ ದೂರವಾಗುತ್ತದೆ.
ಉಪ್ಪು ಮತ್ತು ಬೇಕಿಂಗ್ ಸೋಡಾದ ಮಿಶ್ರಣವೂ ಇದೇ ಪರಿಣಾಮವನ್ನು ನೀಡುತ್ತದೆ. ವೈಟ್ ವಿನೆಗರ್ ಅನ್ನೂ ಈ ರೀತಿ ಬಳಸಬಹುದು. ಬೇಕಿಂಗ್ ಸೋಡಾಗೆ ನಿಂಬೆಹಣ್ಣಿನ ರಸ ಬೆರೆಸಿ. ಇದನ್ನು ಸ್ಟೌವ್ ಮೇಲೆ ಚಿಮುಕಿಸಿ. ಕಾಟನ್ ಬಟ್ಟೆಯಿಂದ ಉಜ್ಜಿದರೆ ಕಲೆ ದೂರವಾಗುತ್ತದೆ.
ಕನಿಷ್ಟ ತಿಂಗಳಿಗೊಮ್ಮೆ ಬರ್ನರ್ ಗಳನ್ನು ರಿಪೇರಿ ಮಾಡುವ ಮೂಲಕ ಹಲವು ಸಮಸ್ಯೆಗಳು ಬರದಂತೆ ನೋಡಿಕೊಳ್ಳಬಹುದು.