ಬದಲಾಗುತ್ತಿರುವ ಜಗತ್ತಿನಲ್ಲಿ ಸಣ್ಣ ವಯಸ್ಸಿನಲ್ಲಿಯೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ತಾ ಇದೆ. ಹೊಟ್ಟೆ ಉರಿ, ನೋವು, ಗ್ಯಾಸ್ ಅಂತಾ ಮಾತ್ರೆ ನುಂಗುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಮನೆ ಮದ್ದು ಸೇವನೆ ಮಾಡಿ ಬಹುಬೇಗ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲದೆ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.
ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ವೇಳೆ ಬೆಚ್ಚಗಿನ ನೀರು ಕುಡಿಯಬೇಕು. ಊಟವಾದ ತಕ್ಷಣ ನೀರು ಸೇವನೆ ಒಳ್ಳೆಯದಲ್ಲ. ಇದರಿಂದ ಗ್ಯಾಸ್ ಜಾಸ್ತಿಯಾಗುತ್ತದೆ.
ಗ್ಯಾಸ್ ಸಮಸ್ಯೆಯುಳ್ಳವರು ತುಳಸಿ ಎಲೆ ಸೇವನೆ ಮಾಡುವುದು ಉತ್ತಮ. ನಾಲ್ಕೈದು ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿ.
ಹಾಲಿಗೆ ಸ್ವಲ್ಪ ಕಾಳು ಮೆಣಸಿನ ಪುಡಿ ಸೇರಿಸಿ ಕುಡಿಯುವುದರಿಂದಲೂ ಗ್ಯಾಸ್ ಕಡಿಮೆಯಾಗುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬು ರಸಕ್ಕೆ ಅಡುಗೆ ಸೋಡಾ ಸೇರಿಸಿ ಕುಡಿಯುತ್ತ ಬನ್ನಿ.
ಗ್ಯಾಸಿನ ಸಮಸ್ಯೆ ಜಾಸ್ತಿ ಇರುವವರು ಬಿಸಿ ನೀರಿಗೆ ಇಂಗು ಸೇರಿಸಿ ಕುಡಿಯಿರಿ. ದಿನಕ್ಕೆ ಮೂರು ಬಾರಿ ಹೀಗೆ ಮಾಡುತ್ತ ಬಂದರೆ ಗ್ಯಾಸ್ ನಿಯಂತ್ರಣಕ್ಕೆ ಬರುತ್ತದೆ.
ದಾಲ್ಚಿನಿ ಕೂಡ ಗ್ಯಾಸ್ ಗೆ ಒಳ್ಳೆಯ ಮನೆ ಮದ್ದು. ನೀರಿಗೆ ದಾಲ್ಜಿನಿ ಪುಡಿ ಸೇರಿಸಿ ಕುದಿಸಿ ತಣ್ಣಗಾದ ಮೇಲೆ ದಿನಕ್ಕೆ ಎರಡು ಬಾರಿ ಕುಡಿಯಿರಿ.
ಬೆಳ್ಳುಳ್ಳಿ, ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಗ್ಯಾಸ್ ಕಡಿಮೆಯಾಗುತ್ತದೆ.