alex Certify ಗ್ಯಾಸ್‌ ಮತ್ತು ಆಸಿಡಿಟಿ ನಿವಾರಿಸುತ್ತೆ ನಿಮ್ಮ ಮಲಗುವ ಭಂಗಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಸ್‌ ಮತ್ತು ಆಸಿಡಿಟಿ ನಿವಾರಿಸುತ್ತೆ ನಿಮ್ಮ ಮಲಗುವ ಭಂಗಿ…!

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಹಾಗೂ ಅಸಿಡಿಟಿ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಟ್ಟ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದ ಅನೇಕ ಫಿಟ್ನೆಸ್ ಸಂಬಂಧಿತ ಕಾಯಿಲೆಗಳನ್ನು ಜನರು ಎದುರಿಸುತ್ತಿದ್ದಾರೆ. ಇವುಗಳಲ್ಲಿ ಗ್ಯಾಸ್-ಆಸಿಡಿಟಿಗೆ ಸಂಬಂಧಿಸಿದ ಸಮಸ್ಯೆಯೂ ಒಂದು. ಅನೇಕ ಜನರು ಇದನ್ನು ಕಾಯಿಲೆ ಎಂದು ಪರಿಗಣಿಸುತ್ತಾರೆ, ಆದರೆ ಆರೋಗ್ಯ ತಜ್ಞರು ಇದು ರೋಗವಲ್ಲ  ಜೀವನಶೈಲಿಯ ಅಡಚಣೆಗೆ ಸಂಬಂಧಿಸಿದ ಸಮಸ್ಯೆ ಎಂದು ಹೇಳುತ್ತಾರೆ.

ಇದನ್ನು ದಿನಚರಿ ಸುಧಾರಣೆ ಮೂಲಕ ಗುಣಪಡಿಸಬಹುದು. ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು ಮಾತ್ರವಲ್ಲ, ಮಲಗುವ ವಿಶೇಷ ಭಂಗಿಯನ್ನು ಅಳವಡಿಸಿಕೊಂಡರೆ ಗ್ಯಾಸ್‌ ಮತ್ತು ಅಸಿಡಿಟಿಯಿಂದ ಪಾರಾಗಬಹುದು. ಆ ವಿಧಾನ ಯಾವುದು ಎಂದು ತಿಳಿಯೋಣ.

ಎಡಭಾಗದಲ್ಲಿ ಮಲಗುವುದರಿಂದ ಆಗುವ ಪ್ರಯೋಜನಗಳು

ಆರೋಗ್ಯ ತಜ್ಞರ ಪ್ರಕಾರ, ಗ್ಯಾಸ್ ಮತ್ತು ಆಸಿಡಿಟಿ ಇದ್ದರೆ ಮಲಗುವ ಭಂಗಿಯನ್ನು ಸರಿಪಡಿಸಿಕೊಳ್ಳಬೇಕು. ಇದಕ್ಕಾಗಿ ಜನರು ಎಡಭಾಗದಲ್ಲಿ ಮಲಗಬೇಕು. ಹೀಗೆ ಮಾಡುವುದರಿಂದ ಮೆದುಳು ಮತ್ತು ಹೊಟ್ಟೆ ಎರಡರ ಆರೋಗ್ಯವೂ ಸರಿಯಾಗಿರುತ್ತದೆ. ಎಡಭಾಗದಲ್ಲಿ ಮಲಗುವುದರಿಂದ ಹಲವಾರು ಪ್ರಯೋಜನಗಳಿವೆ. ಹೃದಯದ ಮೇಲೆ ಹೆಚ್ಚುವರಿ ಒತ್ತಡ ಬೀಳುವುದಿಲ್ಲ. ಇದರಿಂದ ರಾತ್ರಿ ಮಲಗುವಾಗಲೂ ಹೃದಯ ತನ್ನ ಕೆಲಸವನ್ನು ಆರಾಮವಾಗಿ ಮಾಡುತ್ತಲೇ ಇರುತ್ತದೆ. ರಾತ್ರಿ ಮಲಗಿದಾಗ ಗೊರಕೆ ಹೊಡೆಯುವ ಅಭ್ಯಾಸವಿರುವವರು ಅದನ್ನು ತಪ್ಪಿಸಲು ಎಡಮಗ್ಗುಲಲ್ಲಿ ಮಲಗಬೇಕು.

ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಕೆಲಸ ಮಾಡುತ್ತದೆ

ಗ್ಯಾಸ್, ಅಸಿಡಿಟಿ ಸಮಸ್ಯೆ ಇರುವವರು ಅಥವಾ ಎದೆಯುರಿ ಅನುಭವಿಸುವವರು ಎಡಭಾಗದಲ್ಲಿ ಮಲಗುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಮ್ಮ ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯು ಯಾವುದೇ ಒತ್ತಡವಿಲ್ಲದೆ ತನ್ನ ಕೆಲಸವನ್ನು ಮಾಡುತ್ತಲೇ ಇರುತ್ತದೆ.ಈ ಭಂಗಿಯಲ್ಲಿ ಮಲಗಿದರೆ ಆಯಾಸ ಕೂಡ ನಿವಾರಣೆಯಾಗುತ್ತದೆ. ರಾತ್ರಿ ಎಡಮಗ್ಗುಲಲ್ಲಿ ನಮ್ಮ ಯಕೃತ್ತು ತನ್ನ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತದೆ. ಈ ವಿಧಾನವನ್ನು  ಅಳವಡಿಸಿಕೊಳ್ಳುವುದರಿಂದ ಮಲಬದ್ಧತೆ, ಉಷ್ಣ, ಹೊಟ್ಟೆ ಉಬ್ಬರಿಸುವಿಕೆಯಿಂದಲೂ ಪರಿಹಾರ ಪಡೆಯಬಹುದು.  

ಬೆನ್ನುಮೂಳೆ ಗಟ್ಟಿಯಾಗುತ್ತದೆ

ಆರೋಗ್ಯ ತಜ್ಞರ ಪ್ರಕಾರ ಎಡ ಮಗ್ಗುಲಲ್ಲಿ ಮಲಗುವುದರಿಂದ ಬೆನ್ನುಹುರಿಗೆ ಬಹಳಷ್ಟು ಪ್ರಯೋಜನವಾಗುತ್ತದೆ. ಅದು ಇನ್ನಷ್ಟು ಗಟ್ಟಿಯಾಗುತ್ತದೆ. ದೇಹದ ರಕ್ತ ಸಂಚಾರವೂ ಸುಧಾರಿಸುತ್ತದೆ. ಇವೆಲ್ಲದರ ಜೊತೆಗೆ ಎಡ ಮಗ್ಗುಲಲ್ಲಿ ಮಲಗುವುದರಿಂದ ಮೆದುಳಿನ ಆರೋಗ್ಯವೂ ಸುಧಾರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...