ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯ ಕಾರಣದಿಂದ ವಾಂತಿ, ಹೊಟ್ಟೆಯುರಿ, ಹೊಟ್ಟೆ ತೊಳೆಸಿದಂತಾಗುವುದು ಆಗುತ್ತದೆ. ಏನೇ ತಿಂದರೂ ಸರಿಯಾಗಿ ಜೀರ್ಣವಾಗದೇ ಬಾಯಲ್ಲಿ ನೀರು ಒಸರಿದಂತೆ ಆಗುವ ಸಮಸ್ಯೆ ಈ ಗ್ಯಾಸ್ಟ್ರಿಕ್ ನಿಂದ ಆಗುತ್ತದೆ. ಒಂದಷ್ಟು ಮನೆಮದ್ದಿನ ಮೂಲಕ ಸುಲಭವಾಗಿ ಇದನ್ನು ನಿವಾರಿಸಿಕೊಳ್ಳಬಹುದು.
*ನಮ್ಮ ದೇಹದ ಸಾಕಷ್ಟು ಸಮ್ಯಸ್ಯೆಯನ್ನು ನೀರಿನ ಮೂಲಕವೇ ಕಡಿಮೆ ಮಾಡಿಕೊಳ್ಳಬಹುದು. ನೀರು ಕಡಿಮೆ ಕುಡಿಯುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಮಹಿಳೆಯರು ದಿನಕ್ಕೆ 2.7 ಲೀಟರ್ ಹಾಗೂ ಪುರುಷರು 3.7 ಲೀಟರ್ ನೀರು ಕುಡಿಯಬೇಕು. ಈ ನೀರು ಕುಡಿಯುವುದರಿಂದ ಜೀರ್ಣಕ್ರೀಯೆ ಸರಾಗವಾಗಿ ಆಗುತ್ತದೆ.
*ಒಂದು ಟೀ ಸ್ಪೂನ್ ಜೀರಿಗೆ, ½ ಟೀ ಸ್ಪೂನ್ ಸೋಂಪು, 6 ಕಾಳು ಮೆಣಸು ಇವೆಲ್ಲವನ್ನು ತುಸು ಹುರಿದುಕೊಂಡು ಪುಡಿ ಮಾಡಿ. ನಂತರ ಒಂದು ಗ್ಲಾಸ್ ನೀರನ್ನು ಒಲೆಯ ಮೇಲಿಟ್ಟು ನೀರು ಬಿಸಿಯಾದಾಗ ಮಾಡಿಟ್ಟುಕೊಂಡ ಪೌಡರ್ ಹಾಕಿ ಕುದಿಸಿ. ನಂತರ ಸೋಸಿ ಕುಡಿಯಿರಿ. ಇದು ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಶಮನಗೊಳಿಸುತ್ತದೆ.
*ಒಂದು ಗ್ಲಾಸ್ ನೀರನ್ನು ಬಿಸಿ ಮಾಡಿಕೊಂಡು ಅದಕ್ಕೆ ಕಾಲು ಇಂಚು ಶುಂಠಿಯನ್ನು ಜಜ್ಜಿ ಹಾಕಿ 5 ನಿಮಿಷಗಳ ಕಾಲ ಕುದಿಸಿ. ನಂತರ ಇದನ್ನು ಸೋಸಿಕೊಂಡು ಹದ ಬಿಸಿಯಿರುವಾಗಲೇ ಕುಡಿಯಿರಿ. ಶುಂಠಿಯಲ್ಲಿರುವ ಔಷಧೀಯ ಗುಣ ವಾಂತಿಯನ್ನು ಕಡಿಮೆ ಮಾಡುತ್ತದೆ. ಜೀರ್ಣ ಕ್ರೀಯೆಯನ್ನು ಸರಿಯಾಗುವಂತೆ ಮಾಡುತ್ತದೆ.