ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಕಾಣಿಸಿಕೊಂಡಾಗ ಎದೆಯಲ್ಲಿ ನೋವು ಕಂಡುಬರುತ್ತದೆ. ಇದು ಗ್ಯಾಸ್ ನ ನೋವು ಎಂದು ಕಡೆಗಣಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಗ್ಯಾಸ್ ಸಮಸ್ಯೆಯಿಂದಲೇ ಹೊಟ್ಟೆ ನೋವು, ಎದೆ ನೋವು ಕಾಣಿಸಿಕೊಂಡಿದ್ದರೆ ಹೆಚ್ಚಿನ ನಾರಿನಾಂಶ ಇರುವ ಆಹಾರ ಸೇವಿಸಿ. ಇದರಿಂದ ಕರುಳು ಶುಚಿಗೊಳ್ಳುತ್ತದೆ. ಬೀನ್ಸ್, ಬೋಕೊಲಿ, ಕ್ಯಾಬೇಜ್, ಸೇಬು ಮತ್ತು ಧಾನ್ಯಗಳು ಅಧಿಕ ನಾರಿನಾಂಶ ಹೊಂದಿದೆ.
ಊಟ ಮಾಡುವಾಗ, ನೀರು ಕುಡಿಯುವಾಗ, ಚೂಯಿಂಗ್ ಗಮ್ ಜಗಿಯುವಾಗ ಗಾಳಿಯೂ ಹೊಟ್ಟೆಯೊಳಗೆ ಹೋಗುತ್ತದೆ.
ಗಬಗಬನೆ ತಿಂದರೂ ಹೊಟ್ಟೆಯೊಳಗೆ ಗಾಳಿ ಹೋಗಿ ಕರುಳಿನಲ್ಲಿ ಗಾಳಿ ಹೆಚ್ಚಾಗಿ ನೋವು ಕಂಡುಬರುತ್ತದೆ. ಸೋಡಾ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಕಾಣಿಸಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಅತಿಯಾಗಿ ಬ್ಯಾಕ್ಟೀರಿಯಾ ಬೆಳೆದರೆ ಅದರಿಂದ ಮಧುಮೇಹಿಗಳಲ್ಲಿ ಕೂಡ ಗ್ಯಾಸ್ ಉತ್ಪತ್ತಿ ಆಗುತ್ತದೆ.