ಕೆಲವು ಆಹಾರಗಳಿಂದ ದೂರವಿರುವ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತವಾಗಿ ಗುಡ್ ಬೈ ಹೇಳಬಹುದು.
ಕ್ಯಾಬೇಜ್ ಅಂದರೆ ಎಲೆಕೋಸು ಇದು ಸುಲಭವಾಗಿ ಜೀರ್ಣವಾಗದ ತರಕಾರಿ. ಇದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ.
ರಾತ್ರಿಯ ವೇಳೆ ಎಲೆಕೋಸು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಸೆಳೆತ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚುತ್ತದೆ.
ಆಲೂಗಡ್ಡೆ ಎಲ್ಲರಿಗೂ ಇಷ್ಟವಾದ ತರಕಾರಿ. ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಆಲೂಗಡ್ಡೆಯಿಂದ ದೂರವಿರುವುದು ಉತ್ತಮ. ಆಲೂಗಡ್ಡೆಯಲ್ಲಿ ಹೆಚ್ಚುರುವ ಪಿಷ್ಟ ಜೀರ್ಣಕ್ರಿಯೆಗೆ ಅಡ್ಡಿಯನ್ನು ಉಂಟು ಮಾಡುತ್ತದೆ. ಅದರಲ್ಲೂ ಕಾಳುಗಳ ಜೊತೆ ಬೇಯಿಸಿದ ಆಲೂಗಡ್ಡೆಯನ್ನು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ.
ಕಲ್ಲಂಗಡಿಯಲ್ಲಿ ನೀರು ಮತ್ತು ಖನಿಜದ ಪ್ರಮಾಣ ಹೆಚ್ಚಾಗಿರುತ್ತದೆ. ಈ ಹಣ್ಣು ಕರುಳಿನಲ್ಲಿ ಸಮಸ್ಯೆ ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಅಡ್ಡಿ ಆಗುತ್ತದೆ ಇದರಲ್ಲಿ ಸಕ್ಕರೆ ಮತ್ತು ಮೇನಿಟಾಲ್ ಇರುವುದರಿಂದ ಹೊಟ್ಟೆ ಉಬ್ಬರಿಸುತ್ತದೆ. ಸೌತೆಕಾಯಿ ಈ ಸೌತೆಕಾಯಿಯಲ್ಲಿ ನೀರು ಮತ್ತು ಫೈಬರ್ ಅಂಶ ಹೆಚ್ಚಾಗಿರುವುದರಿಂದ ರಾತ್ರಿ ವೇಳೆ ಇದನ್ನು ತಿನ್ನುವುದು ಒಳ್ಳೆಯದಲ್ಲ.