ಗ್ಯಾಸ್ಟ್ರಿಕ್ ಸಮಸ್ಯೆ ಒಂದಿಲ್ಲೊಂದು ರೀತಿಯಲ್ಲಿ ಪ್ರತಿನಿತ್ಯ ತೊಂದರೆ ಕೊಡುತ್ತಲೇ ಇರುತ್ತದೆ. ಅದರ ಪರಿಹಾರಕ್ಕೆ ಮನೆಯಲ್ಲೇ ಮಾಡಬಹುದಾದ ಕಷಾಯದ ಬಗ್ಗೆ ತಿಳಿಯೋಣ.
ಒಂದು ಲೋಟ ನೀರಿಗೆ ಒಂದು ದೊಡ್ಡ ಚಮಚ ಜೀರಿಗೆ ಹಾಕಿ, 4 ಇಂಚು ದಾಲ್ಚಿನ್ನಿ ಸೇರಿಸಿ ಚೆನ್ನಾಗಿ ಕುದಿಸಿ. ಐದು ನಿಮಿಷ ಕುದಿದ ಬಳಿಕ ಶೋಧಿಸಿ. ಒಂದು ಚಮಚ ಲಿಂಬೆ ರಸವನ್ನು ಹಿಂಡಿ ಕುಡಿಯಿರಿ.
ದಿನದ ಯಾವುದೇ ಹೊತ್ತಿನಲ್ಲಾದರೂ ಇದನ್ನು ಸೇವಿಸಬಹುದು. ಈ ಕಷಾಯವು ಗ್ಯಾಸ್ಟ್ರಿಕ್ ಸಮಸ್ಯೆಗೆ ತುಂಬಾ ಉಪಯುಕ್ತವಾಗಿದೆ ಇದನ್ನು ನೀವು ಯಾವುದೇ ಸಮಯದಲ್ಲೂ ಸಹ ಕುಡಿಯಬಹುದು.
ಗ್ಯಾಸ್ಟ್ರಿಕ್ ಸಮಸ್ಯೆಗೆ ಅಡುಗೆ ಸೋಡಾ ಕೂಡ ಬಳಸಬಹುದು. ಒಂದು ಚಿಟಿಕೆ ಅಡುಗೆ ಸೋಡಾಗೆ ಸ್ವಲ್ಪ ಉಪ್ಪು ಸೇರಿಸಿ, ಸ್ವಲ್ಪ ನಿಂಬೆರಸ ಸೇರಿಸಿ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾದಾಗ ಕುಡಿಯಬೇಕು. ಹಸಿ ಶುಂಠಿಯನ್ನು ತಿನ್ನುವುದರಿಂದಲೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಬಹುದು.