alex Certify ಗ್ಯಾಂಗ್ರಿನ್ ಸಮಸ್ಯೆಯಿರುವವರು ವಹಿಸಿ ಈ ಬಗ್ಗೆ ಗಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಂಗ್ರಿನ್ ಸಮಸ್ಯೆಯಿರುವವರು ವಹಿಸಿ ಈ ಬಗ್ಗೆ ಗಮನ

ಗ್ಯಾಂಗ್ರಿನ್ ಸಮಸ್ಯೆ ಕಾಡುವುದು ದೇಹದ ಎಲ್ಲಾ ಭಾಗಗಳಿಗೂ ಸರಿಯಾಗಿ ರಕ್ತ ಸಂಚಾರ ಆಗದಿದ್ದಾಗ. ಆ ನಿರ್ದಿಷ್ಟ ಭಾಗ ಕ್ರಮೇಣ ಕೊಳೆಯುತ್ತಾ ಹೋಗುತ್ತದೆ. ಇದನ್ನೇ ಗ್ಯಾಂಗ್ರೀನ್ ಎನ್ನುತ್ತಾರೆ. ಇದು ವೆರಿಕೋಸ್ ನಿಂದ ಕಾಣಿಸಿಕೊಳ್ಳಬಹುದು ಅಥವಾ ಇನ್ನಾವುದೋ ಚರ್ಮ ರೋಗದಿಂದ ಕಾಣಿಸಿಕೊಂಡಿರಬಹುದು.

ಇದರ ನಿಯಂತ್ರಣಕ್ಕೆ ವೈದ್ಯರ ಔಷಧ ಪಡೆಯುವುದು ಅನಿವಾರ್ಯವಾಗಿರಬಹುದು. ಆದರೆ ನಿಮ್ಮ ಪ್ರಯತ್ನವೂ ಇದಕ್ಕೆ ಬಹಳ ಮುಖ್ಯ. ನಿತ್ಯ ಈ ಗಾಯವನ್ನು ತೊಳೆದು, ಬ್ಯಾಂಡೇಜ್ ಮಾಡಬೇಕು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.

ಗ್ಯಾಂಗ್ರೀನ್ ನೊಂದಿಗೇ ಬರುವ ಮಧುಮೇಹವನ್ನು ನಿಯಂತ್ರಣದಲ್ಲಿಡಿ. ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸದಿರಿ. ಜ್ಯೂಸ್, ಐಸ್ ಕ್ರೀಮ್ ನಿಂದ ಕಡ್ಡಾಯವಾಗಿ ದೂರವಿರಿ.

ಎಣ್ಣೆಯಂಶ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸುವುದೂ ಒಳ್ಳೆಯದಲ್ಲ.

ಗ್ಯಾಂಗ್ರೀನ್ ಸಮಸ್ಯೆ ಇರುವವರು ಮದ್ಯಪಾನ ಮತ್ತು ಧೂಮಪಾನದಿಂದ ಶಾಶ್ವತವಾಗಿ ದೂರವಿರಿ. ಇದರಿಂದ ನಿಧಾನದಲ್ಲಾದರೂ ಈ ಸಮಸ್ಯೆಯನ್ನು ದೂರ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...