ಗೋ ಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂಬುದು ತಿಳಿದಿರುವ ವಿಚಾರ. ಈಗ ಇದನ್ನು ಮತ್ತಷ್ಟು ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಛತ್ತೀಸ್ ಗಢ ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಹೈನುಗಾರಿಕೆ ಹಾಗೂ ದೇಸಿ ತಳಿಯ ಗೋವುಗಳಿಂದ ಲಭಿಸುವ ಮೂತ್ರವನ್ನು ಖರೀದಿಸಲು ಛತ್ತೀಸ್ ಗಢ ಸರ್ಕಾರ ಯೋಜನೆಯೊಂದನ್ನು ರೂಪಿಸಿದ್ದು, ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಈ ವಿಚಾರವನ್ನು ತಿಳಿಸಿದ್ದಾರೆ.
ಈಗಾಗಲೇ ಗೋ ಧನ್ ನ್ಯಾಯ ಯೋಜನೆ ಹೆಸರಲ್ಲಿ ಗೋವಿನ ಸಗಣಿಯನ್ನು ಪ್ರತಿ ಕೆಜಿಗೆ ಎರಡು ರೂಪಾಯಿಯಂತೆ ಛತ್ತೀಸ್ ಗಢ ಸರ್ಕಾರ ಖರೀದಿಸುತ್ತಿದ್ದು, ಇದೀಗ ಖರೀದಿಸುವ ಗೋ ಮೂತ್ರವನ್ನು ಸಂಸ್ಕರಿಸಿ ಔಷಧ ತಯಾರಿಕೆಗೆ ಬಳಸಲಾಗುವುದು ಎಂದು ಹೇಳಲಾಗಿದೆ.